ಹೊಸದಿಗಂತ ವರದಿ ಹಾವೇರಿ:
ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ತಾಲೂಕಿನ ಕುರುಬಗೊಂಡ ಗ್ರಾಮದ ಯೂನಿಯನ್ ಬ್ಯಾಂಕ್ ಪ್ರಭಾರಿ ವ್ಯವಸ್ಥಾಪಕರನ್ನು ಪೋಲಿಸರು ಗುರುವಾರ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಕುರುಬಗೊಂಡ ಗ್ರಾಮಸ್ಥರು ಕಷ್ಟಪಟ್ಟು ದುಡಿದು ಬ್ಯಾಂಕಿನಲ್ಲಿ ಇಟ್ಟ ಎಫ್.ಡಿ ಹಣ ಮತ್ತು ಚಿನ್ನಾಭರಣದ ಸಾಲ ಹಾಗೂ ತಮ್ಮ ಖಾತೆಗೆ ಜಮಾ ಹಣ ಹೀಗೆ ಅಂದಾಜು 1.62 ಕೋಟಿ ಮೊತ್ತವನ್ನು ಬ್ಯಾಂಕ್ ಪ್ರಭಾರಿ ಮ್ಯಾನೇಜರ್ ಅರ್ಚನಾ ಬೇಟಗೇರಿ ನುಂಗಿ ಹಾಕಿದ್ದರು.
ಈ ಕುರಿತು ಇತ್ತೀಚೆಗಷ್ಟೇ ಗ್ರಾಮಸ್ಥರು ಈ ಬಗ್ಗೆ ದೂರು ನೀಡಿ, ಕ್ರಮಕ್ಕೆ ವಿಳಂಭ ಖಂಡಿಸಿ ಯೂನಿಯನ್ ಬ್ಯಾಂಕ್ ನ ಮುಂದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅವರನ್ನು ಸೈಬರ್ ಕ್ರೈಮ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ರವಿರಾಜ್ ಅವರು ಗ್ರಾಹರಿಗೆ ವಂಚನೆ ಮಾಡಿದ ಕುರಿತು ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಅದರ ಅನ್ವಯ ಸೈಬರ್ ಕ್ರೈಮ್ ಪೊಲೀಸರು ಅರ್ಚನಾ ಬೇಟಿಗೇರಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.