ಹೊಸದಿಗಂತ ವರದಿ ಕಲಬುರಗಿ:
ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ, ಶಾಸಕ ಬಿ.ವೈ.ವಿಜಯೇಂದ್ರ ಆಯ್ಕೆಯಾಗಿರುವುದರಿಂದ ಕಲಬುರಗಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಇಂದು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು, ವಿಜಯೇಂದ್ರ ಅವರ ಭಾವಚಿತ್ರವಿರುವ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಯಾನಂದ ಪಾಟೀಲ್, ಶ್ರೀಧರ ನಾಗನಹಳ್ಳಿ, ಕಲ್ಯಾಣರಾವ ಪಾಟೀಲ ಕಣ್ಣಿ, ಗೌರಿ ಚಿಚಕೋಟೆ, ಭಾಗೀರಥಿ ಗುನ್ನಪುರ, ರಾಜ್ಕುಮಾರ ಕಗ್ಗನಮಡಿ, ಸಿದ್ದು ತುಪ್ಪದ, ಸುನಿಲ ಮಹಾಗಾಂವ, ಗುರುರಾಜ ಅಂಬಾಡಿ, ಸುನಿಲ ಕೋಲಕುರ,ಗುರುರಾಜ ಸುಂಟನೂರ, ಮಹೇಶಚಂದ್ರ ಪಾಟೀಲ ಕಣ್ಣಿ, ಸುಜಾತಸಿಂಗ, ಮಂಜು ವಾರದ, ಅನಿಲ ಮುಗಳಿ ಉಪಸ್ಥಿತರಿದ್ದರು.