‘ಟೈಗರ್ 3’ ಬಿಡುಗಡೆಗೆ ಕ್ಷಣಗಣನೆ: ಸ್ಪಾಯ್ಲರ್‌ ಪೋಸ್ಟ್ ಮಾಡದಂತೆ ಸಲ್ಮಾನ್, ಕತ್ರಿನಾ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಪ್ರಿಯರಿಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಇತ್ತ ಈ ಕ್ಷಣ ಅಭಿಮಾನಿಗಳಿಗೆ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅವರು ಮನವಿಯಂತಿರುವ ವಿಶೇಷ ಸಂದೇಶ ಕಳುಹಿಸಿದ್ದಾರೆ. ತಮ್ಮ ಈ ಬಹುನಿರೀಕ್ಷಿತ ಸಿನಿಮಾ ವೀಕ್ಷಿಸಿದ ನಂತರ ಸ್ಪಾಯ್ಲರ್‌ (Spoilers) ಪೋಸ್ಟ್ ಮಾಡದಂತೆ ಮನವಿ ಮಾಡಿದ್ದಾರೆ.

ಇಸ್ಟಾಗ್ರಾಮ್‌ನಲ್ಲಿ ಸ್ಟೋರಿ ಶೇರ್ ಮಾಡಿರುವ ಸೂಪರ್​ ಸ್ಟಾರ್ ಸಲ್ಮಾನ್ ಖಾನ್​, “ನಾವು ಬಹಳ ಉತ್ಸಾಹದಿಂದ ಟೈಗರ್ 3 ಸಿನಿಮಾ ಮಾಡಿದ್ದೇವೆ. ನೀವು ಸಿನಿಮಾವನ್ನು ರಕ್ಷಿಸುತ್ತೀರೆಂದು ನಂಬಿದ್ದೇವೆ. ಸ್ಪಾಯ್ಲರ್‌ಗಳು ಅದ್ಭುತ ಸಿನಿಮೀಯ ಅನುಭವವನ್ನು ಹಾಳು ಮಾಡಬಹುದು. ನೀವು ಸರಿಯಾದುದ್ದನ್ನೇ ಮಾಡುತ್ತೀರಿ ಎಂದು ನಾವು ನಂಬುತ್ತೇವೆ. ಟೈಗರ್ 3 ನಿಮಗೆ ನಮ್ಮಿಂದ ದೀಪಾವಳಿ ಉಡುಗೊರೆಯಾಗಿದೆ ಎಂದು ನಾವು ನಂಬಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ನಟಿ ಕತ್ರಿನಾ ಕೈಫ್ ಕೂಡ ಸಿನಿಮಾ ಸ್ಪಾಯ್ಲ್ ಮಾಡದಂತೆ ಮನವಿ ಮಾಡಿದ್ದಾರೆ. ”ಟೈಗರ್​ 3 ಕಥೆಯಲ್ಲಿನ ಟ್ವಿಸ್ಟ್ ಅಂಡ್​​​ ಸರ್​​ಪ್ರೈಸಸ್ ಉತ್ತಮ ಸಿನಿಮೀಯ ಅನುಭವ ನೀಡಲಿದೆ. ಸಿನಿಮಾ ಲೀಕ್ ಮಾಡದಂತೆ ನಾವು ನಿಮ್ಮಲ್ಲಿ ವಿನಂತಿಸುತ್ತೇವೆ. ನಮ್ಮ ಪ್ರೀತಿಯ ಶ್ರಮವನ್ನು ರಕ್ಷಿಸುವ ಶಕ್ತಿ ನಿಮ್ಮಲ್ಲಿದೆ. ನಮ್ಮ ಸಿನಿಮಾ ನಿಮಗೆ ಅತ್ಯುತ್ತಮ ಮನರಂಜನೆ ನೀಡಲಿದೆ. ಧನ್ಯವಾದಗಳು, ದೀಪಾವಳಿಯ ಶುಭಾಶಯಗಳು” ಎಂದು ಬರೆದಿದ್ದಾರೆ.

ಸ್ಪಾಯ್ಲರ್‌ಗಳಿಂದ “ಥಿಯೇಟರ್‌ಗಳಲ್ಲಿ ಸಿಗುವ ಸಿನಿಮೀಯ ಅನುಭವಕ್ಕೆ ಅಡ್ಡಿಯಾಗುತ್ತದೆ” ಎಂದು ಖಳನಾಯಕನ ಪಾತ್ರ ನಿರ್ವಹಿಸಿರುವ ಇಮ್ರಾನ್ ಹಶ್ಮಿ ತಿಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ, ”ಟೈಗರ್​ 3 ಸಿನಿಮಾ ಲೆಕ್ಕವಿಲ್ಲದಷ್ಟು ಸೀಕ್ರೆಟ್ಸ್ ಒಳಗೊಂಡಿದೆ, ಅವುಗಳನ್ನು ಸುರಕ್ಷಿತವಾಗಿರಿಸುವಿರಿ ಎಂದು ನಾವು ನಂಬುತ್ತೇವೆ. ದಯವಿಟ್ಟು ಯಾವುದೇ ಸ್ಪಾಯ್ಲರ್‌ಗಳನ್ನು (ವಿಡಿಯೋಗಳನ್ನು) ಬಹಿರಂಗಪಡಿಸಬೇಡಿ. ಏಕೆಂದರೆ ಅವು ಚಿತ್ರಮಂದಿರಗಳಲ್ಲಿ ಮಾತ್ರ ಸಿಗುವ ಸಿನಿಮೀಯ ಅನುಭವಕ್ಕೆ ಅಡ್ಡಿಯಾಗುತ್ತದೆ. ಟೈಗರ್ 3 ಸಿನಿಮಾ ಮಾಡಲು ನಾವು ನಿಜವಾಗಿಯೂ ಬಹಳ ಶ್ರಮ ಹಾಕಿದ್ದೇವೆ. ನೀವು ನಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತೀರಿ ಎಂದು ತಿಳಿದಿದೆ. ದೀಪಾವಳಿ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

ಮನೀಶ್​ ಶರ್ಮಾ ನಿರ್ದೇಶನದ ಟೈಗರ್​ 3 ಚಿತ್ರವನ್ನು ಯಶ್​ ರಾಜ್​ ಫಿಲ್ಮ್ಸ್ ಬ್ಯಾನರ್​ ಅಡಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ನಾಳೆ ಚಿತ್ರಮಂದಿರಗಳಲ್ಲಿ ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!