ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ರಾಜ್ಯ ಹಾಗೂ ಅಂತರರಾಜ್ಯ ಸಾರಿಗೆ ಸೇವೆಗಳನ್ನು ಒದಗಿದುತ್ತಿದೆ. ನವೆಂಬರ್ 10 ರಿಂದ 12ರ ನಡುವೆ ಕೆಎಸ್‌ಆರ್‌ಟಿಸಿ ಎರಡು ಸಾವಿರ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ. ಬಿಎಂಟಿಸಿ 150ಬಸ್‌ಗಳನ್ನು ರಸ್ತೆಗಿಳಿಸಿದೆ.
ಶುಕ್ರವಾರ, ಶನಿವಾರ ಹಾಗೂ ಭಾನುವಾರವೂ ಜನ ಊರುಗಳಿಗೆ ತೆರಳುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಅಂತರರಾಜ್ಯಗಳಿಗೂ ಬಸ್‌ಗಳನ್ನು ಓಡಿಸಲಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳದ ವಿವಿಧ ನಗರಗಳಿಗೆ ಬೆಂಗಳೂರಿನಿಂದ ಬಸ್ ವ್ಯವಸ್ಥೆ ಇದೆ.
ಪ್ರಯಾಣಿಕರಿಗೆ ಅನುಕೂಲವವಾಗಲು ಮುಂಗಡ ಕಾಯ್ದರಿಸುವಿಕೆಗೂ ಅನುಮತಿ ನೀಡಲಾಗಿದೆ. ಹಬ್ಬದ ಹಿನ್ನೆಲೆ ತಮ್ಮ ಗಮ್ಯ ಸ್ಥಾನಗಳತ್ತ ತೆರಳಲು ಸಾವಿರಾರು ಪ್ರಯಾಣಿಕರು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುತ್ತಿದ್ದಾರೆ. ಶುಕ್ರವಾರ ರಾತ್ರಿಯಿಂದ ಮೆಜೆಸ್ಟಿಕ್ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದು, ಜನಂಸದಣಿ ಇಂದೂ ಮುಂದುವರಿದಿದೆ.