ಪ್ರಧಾನಿ ಮೋದಿ ಹೋದಲ್ಲೆಲ್ಲಾ ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸುತ್ತಾರೆ, ನಾನು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಪ್ರಧಾನಿ ಮೋದಿ ಹೋದಲ್ಲೆಲ್ಲಾ ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸುತ್ತಾರೆ, ನಿಂದಿಸುತ್ತಾರೆ, ಅಸಂಬದ್ಧವಾಗಿ ಮಾತನಾಡುತ್ತಾರೆ. ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಗುರಿಯನ್ನು ನಾನು ಈಗಾಗಲೇ ಹೇಳಿದ್ದೇನೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ .

ಪ್ರಧಾನಿ ನರೇಂದ್ರ ಮೋದಿಯವರ (Narendra Modi) “ಮೂರ್ಖೋನ್ ಕೆ ಸರ್ದಾರ್” (ಮೂರ್ಖ ಜನರ ನಾಯಕ) ಟೀಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi), ತನ್ನ ವಿರುದ್ಧ ಪ್ರಧಾನಿ ಆಡಿದ “ನಿಂದನೀಯ ಮಾತುಗಳು” ಅವರು ಯಾರು ಎಂಬುದನ್ನು ಬಯಲು ಮಾಡಿದೆ. ಗೌತಮ್ ಅದಾನಿ (Gautam Adani) ನೇತೃತ್ವದ ಅದಾನಿ ಗ್ರೂಪ್‌ಗೆ ಮೋದಿ ಸರ್ಕಾರ ಹಣ ನೀಡುತ್ತಿದೆ ಎಂದು ಆರೋಪಿಸಿದ ಗಾಂಧಿ, ದೇಶದ ಬಡ ವರ್ಗಗಳಿಗೆ ಹೆಚ್ಚಿನ ಹಣವನ್ನು ನೀಡುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಹೋದಲ್ಲೆಲ್ಲಾ ನನ್ನ ವಿರುದ್ಧ ಕೆಟ್ಟ ಪದಗಳನ್ನು ಬಳಸುತ್ತಾರೆ, ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಗುರಿಯನ್ನು ನಾನು ಈಗಾಗಲೇ ಹೇಳಿದ್ದೇನೆ. ಅವರು ನನ್ನನ್ನು ಯಾವುದೇ ಹೆಸರಿನಿಂದ ಕರೆಯಬಹುದು, ನಾನು ನಿಜವಾಗಿಯೂ ಹೆದರುವುದಿಲ್ಲ. ನನ್ನ ಗುರಿ ಏನೆಂದರೆ ಪ್ರಧಾನಿ ಮೋದಿ ಎಷ್ಚು ಹಣವನ್ನು ಅದಾನಿಗೆ ಕೊಡುತ್ತಾರೆಯೋ ಅಷ್ಟು ಹಣವನ್ನು ಬಡವರಿಗೆ ಕೊಡುವುದಾಗಿದೆ ಎಂದು ಹೇಳಿದ್ದಾರೆ.

ಮೋದಿಯವರು ನನ್ನ ವಿರುದ್ಧ ನಿಂದನೀಯ ಪದಗಳನ್ನು ಬಳಸುತ್ತಿರುವುದು ನೋಡಿದರೆ ನಾನು ಸರಿಯಾದುದನ್ನೇ ಮಾಡುತ್ತಿದ್ದೇನೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ನಿಜವಾದ ರಾಜಕೀಯವು ಕೋಟ್ಯಾಧಿಪತಿಗಳಿಗೆ ಸಹಾಯ ಮಾಡುವುದಲ್ಲ ಎಂದು ನಾನು ನಿಮಗೆ ತೋರಿಸುತ್ತೇನೆ, ನಿರುದ್ಯೋಗಿಗಳು, ರೈತರು, ಸಣ್ಣ ಉದ್ಯಮಗಳಿಗೆ ಸಹಾಯ ಮಾಡುವ ಮೂಲಕ ನಿಜವಾದ ರಾಜಕೀಯ ನಡೆಯುತ್ತದೆ ನಾನು ನಿಮಗೆ ತೋರಿಸುತ್ತೇನೆ. ನೀವು ಇಷ್ಟಪಡುವದನ್ನು ನೀವು ಹೇಳಬಹುದು. ನೀವು ನನ್ನನ್ನು ಎಷ್ಟು ಬೇಕಾದರೂ ನಿಂದಿಸಬಹುದು. ನಿಮ್ಮ ನಿಂದನೆಗಳು ನಾನು ಸರಿಯಾದ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಸಾಬೀತುಪಡಿಸುತ್ತದೆ. ‘ಚಿಡ್ ಮಚ್ತಿ ಹೈ ನಾ, ಇಸ್ಲಿಯೇ ತೋ ಗಲಿ ದೇತೆ ಹೈಂ (ಅವರಿಗೆ ಕಿರಿಕಿರಿ ಅನಿಸಿದಾಗ ನಿಂದಿಸುತ್ತಾರೆ) ಎಂದು ಹೇಳಿದರು.

ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ಭಾರತೀಯರು ‘ಮೇಡ್ ಇನ್ ಚೀನಾ’ ಮೊಬೈಲ್ ಫೋನ್‌ಗಳನ್ನು ಬಳಸುತ್ತಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ ಉಲ್ಲೇಖಿಸಿದ ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕ ಮೂರ್ಖ ಜನರ ನಾಯಕ ಎಂದು ಕರೆದರು. ನಿನ್ನೆ ಕಾಂಗ್ರೆಸ್ ನ ಬುದ್ದಿವಂತರೊಬ್ಬರು ದೇಶದ ಜನರಲ್ಲಿ ಚೈನಾ ಮೊಬೈಲ್ ಮಾತ್ರಇದೆ ಎಂದು ಹೇಳುತ್ತಿದ್ದರು. ಅರೇ ‘ಮೂರ್ಖೋನ್ ಕೆ ಸರ್ದಾರ್’, ನೀವು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದೀರಿ? ಕಾಂಗ್ರೆಸ್ ನಾಯಕರು ಭಾರತದ ಸಾಧನೆಗಳನ್ನು ಕಡೆಗಣಿಸುವ ಮಾನಸಿಕ ಕಾಯಿಲೆಗೆ ತುತ್ತಾಗಿದ್ದಾರೆ. ಅವರು ಭಾರತವನ್ನು ನೋಡಲು ಸಾಧ್ಯವಾಗದ ಯಾವ ವಿದೇಶಿ ಕನ್ನಡಕವನ್ನು ಧರಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದು ರಾಹುಲ್ ಗಾಂಧಿ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಮೋದಿ ಗುಡುಗಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!