ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದ ಹಾಸನಾಂಬ ದೇವಿಯ ಜಾತ್ರೆಯ ಅಂಗವಾಗಿ ಕೇವಲ 12 ದಿನಗಳಿಗೆ ಭಕ್ತರ ದರುಶನಕ್ಕೆ ಅವಕಾಶ ನೀಡಲಾಗಿತ್ತು.ಇದೀಗ ದೇಗುಲ ಬಂದ್ ಆಗಿದೆ.
ಈ ವೇಳೆ ಹುಂಡಿಯಲ್ಲಿ ಬರೋಬ್ಬರಿ 8.72 ಕೋಟಿ ರೂ. ಹಣ ಸಂಗ್ರಹವಾಗಿದೆ. ಇನ್ನು ದೇವಾಲಯದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 6.15 ಕೋಟಿ ರೂ. ಆದಾಯ ಗಳಿಸಿತ್ತು. ಹಾಸನಾಂಬ ದೇವಿಯ 2023ರ ಜಾತ್ರಾ ಮಹೋತ್ಸವದಿಂದ ಸುಮಾರು 15 ಕೋಟಿ ರೂ. ಆದಾಯ ಬಂದಿದೆ.
ಹಾಸನಾಂಬೆ ದೇವರ ಹುಂಡಿಯಲ್ಲಿ ಬರೋಬ್ಬರಿ 2 ಕೋಟಿ 55ಲಕ್ಷ 41ಸಾವಿರದ 497 ರೂಪಾಯಿ ಸಂಗ್ರಹವಾಗಿದೆ ಇದನ್ನು 150ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಮಾಡಿದ್ದಾರೆ.
ದೇವಾಲಯದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 6.15 ಕೋಟಿ ರೂ. ಆದಾಯ ಗಳಿಸಿತ್ತು. ಈಗ ಚಿನ್ನ, ಅಮೇರಿಕಾದ ಡಾಲರ್ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.
ಈ ಬಾರಿ 8 ಕೋಟಿ 72 ಲಕ್ಷದ 41ಸಾವಿರ 531ರೂ ಆದಾಯ ಬಂದಿದ್ದರೆ, ಈ ಹಿಂದೆ ಅತಿಹೆಚ್ಚು ಅಂದರೆ 5.20 ಕೋಟಿ ರೂ. ದಾಖಲೆಯ ಸಂಗ್ರಹವಾಗಿತ್ತು.
ಹುಂಡಿ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಬ್ಯಾಂಕ್ ಅಧಿಕಾರಿಗಳು, ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು.