ಇಸ್ರೇಲ್ -ಹಮಾಸ್ ಸಂಘರ್ಷದಲ್ಲಿ ನಾಗರಿಕರ ಸಾವು: ಪ್ರಧಾನಿ ಮೋದಿ ಖಂಡನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ (Israel) ಮತ್ತು ಹಮಾಸ್ (Hamas) ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಅಪಾರ ಪ್ರಮಾಣದ ಸಾವು-ನೋವುಗಳು ಸಂಭವಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಖಂಡಿಸಿದ್ದಾರೆ.

ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಹೊಸ ಸವಾಲುಗಳ ಕುರಿತು ಮಾತನಾಡಿ, ಭಾರತವು ಸಂಘರ್ಷದಲ್ಲಿ ಸಂಯಮವನ್ನು ಅನುಸರಿಸಿದೆ ಎಂದು ಹೇಳಿದರು.

ನಾವು ರಾಜತಾಂತ್ರಿಕತೆಗೆ ಒತ್ತು ನೀಡಿದ್ದೇವೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪ್ಯಾಲೆಸ್ತೀನ್ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರೊಂದಿಗಿನ ಮಾತುಕತೆಯ ನಂತರ ಭಾರತವು ಪ್ಯಾಲೆಸ್ತೀನಿಯರಿಗೆ ಮಾನವೀಯ ನೆರವು ಕಳುಹಿಸಿದೆ. ಇದು ಜಾಗತಿಕ ಒಳಿತಿಗಾಗಿ ಜಾಗತಿಕ ದಕ್ಷಿಣದ ದೇಶಗಳು ಒಂದಾಗಬೇಕಾದ ಸಮಯ ಎಂದು ಅವರು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!