ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಸನ್ನಿ ಲಿಯೋನ್, ಸದ್ಯ ವಾರಣಾಸಿಗೆ ತೆರಳಿದ್ದು ಅದರ ವಿಡಿಯೋ ಸಕತ್ ವೈರಲ್ ಆಗಿದೆ. ವಾರಣಾಸಿಗೆ ತೆರಳಿದ್ದ ಅವರು, ರಾತ್ರಿ ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದಾರೆ.
ಸದ್ಯ ಸನ್ನಿ ಲಿಯೋನ್ ತಮ್ಮ ಮುಂದಿನ ಮ್ಯೂಸಿಕ್ ವಿಡಿಯೋ ‘ಥರ್ಡ್ ಪಾರ್ಟಿ’ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆಯೇ ನಟಿ ಹಿಂದುಗಳ ಪವಿತ್ರ ತಾಣ ವಾರಣಾಸಿಗೆ ಭೇಟಿ ನೀಡಿದ್ದಾರೆ. ಪ್ರಸಿದ್ಧ ಗಂಗಾ ಆರತಿಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ. ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದ ಅವರು ಪಿಂಕ್ ಸಲ್ವಾರ್ ಸೂಟ್‌ನಲ್ಲಿ ಕಣ್ಮನ ಸೆಳೆದಿದ್ದಾರೆ. ಸನ್ನಿ ಲಿಯೋನ್ ಜೊತೆಗೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಕೂಡ ಇದ್ದರು. ನಟಿ, ನಟ, ಅರ್ಚಕರು ಮತ್ತು ಇತರರೊಂದಿಗೆ ಗಂಗಾ ಆರತಿಯಲ್ಲಿ ಪಾಲ್ಗೊಂಡಿರುವ ವಿಡಿಯೋ ವೈರಲ್ ಆಗಿದೆ. ಕಾಶಿ ಪ್ರವಾಸದ ಬಗ್ಗೆ ಸನ್ನಿ ತುಂಬಾ ಉತ್ಸುಕರಾಗಿದ್ದರು. ಗಂಗಾದಲ್ಲಿ ದೋಣಿ ವಿಹಾರದ ಜೊತೆಗೆ ಚಹಾ ಕುಡಿದೆ, ಬನಾರಸಿ ಪಾನ್ ತಿಂದೆ ಎಂದು ನಟಿ ಹೇಳಿದ್ದಾರೆ. ಇದೇ ವೇಳೆ ಕ್ರಿಕೆಟ್ ಕುರಿತು ಮಾತನಾಡಿರುವ ನಟಿ, ಭಾರತದ ಗೆಲುವಿಗೆ ಶುಭಾಶಯಗಳನ್ನು ತಿಳಿಸಿದರು.