ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮಿತ್ ಶಾ ಸಹಕಾರ ಇಲಾಖೆ ಸಚಿವರಾಗಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಸಚಿವ ಕೆ.ಎನ್.ರಾಜಣ್ಣ ಹಾಡಿಹೊಗಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, , ಪಕ್ಷದ ದೃಷ್ಟಿಯಲ್ಲಿ ಯಾರ್ಯಾರು ಏನು ಬೇಕಾದರೂ ಹೇಳಿಕೊಳ್ಳಬಹುದು. ಆದರೆ ನಾನೊಬ್ಬ ಸಹಕಾರ ಇಲಾಖೆ ಸಚಿವನಾಗಿ ಸ್ವಾಗತಿಸಿದ್ದೇನೆ. ಕೇಂದ್ರ ಸಚಿವ ಅಮಿತ್ ಶಾ ಒಂದು ಹಳ್ಳಿಯ ಸೊಸೈಟಿ ಅಧ್ಯಕ್ಷರಾಗಿದ್ದರು.ಅಹಮದಾಬಾ ದ್ ಜಿಲ್ಲಾ ಬ್ಯಾಂಕ್ ಗುಜರಾತ್ ಅಪೇಕ್ಸ ಬ್ಯಾಂಕ್ ನಿರ್ದೇಶಕರಾಗಿದ್ದರು ಎಂದರು.
ಸಹಕಾರ ಇಲಾಖೆ ಎಲ್ಲಾ ವಿಚಾರಗಳು ಸಹ ಅಮಿತ್ ಶಾ ಗೆ ಗೊತ್ತಿದೆ. ಅಂಥವರು ಸಹಕಾರ ಇಲಾಖೆ ಸಚಿವರಾಗಿರುವುದು ನಮಗೆಲ್ಲರಿಗೂ ಹೆಮ್ಮೆ. ಯಾರೋ ಗೊತ್ತಿಲ್ಲದ ಸಚಿವರು ಇಲಾಖೆಗೆ ಬಂದಾಗ ಪಾಠ ಮಾಡಿ ತಿಳಿಸಬೇಕು. ಅಷ್ಟೊತ್ತಿಗೆ ಅವರ ಅಧಿಕಾರವಧಿ ಮುಗಿದು ಹೋಗಿರುತ್ತದೆ.ಅಮಿತ್ ಶಾ ಬಂದಿದ್ದರಿಂದ ಅನುಕೂಲವಾಗುತ್ತೆ ಅಂತ ಅವತ್ತೇ ಹೇಳಿದ್ದೆ ಎಂದು ಹೇಳಿದರು.
.