ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಉತ್ತರ ವಿಭಾಗ ಮಹಿಳಾ ಸಮನ್ವಯ ಕರ್ನಾಟಕ ದಕ್ಷಿಣ ಪ್ರಾಂತ, ಬೆಂಗಳೂರು ಉತ್ತರ ವಿಭಾಗ ಹಾಗೂ ಯಾದವ ಸೇವಾ ಟ್ರಸ್ಟ್ ಸಹಯೋದೊಂದಿಗೆ ಬೆಂಗಳೂರಿನಲ್ಲಿ ‘ನಾರಿಶಕ್ತಿ ಸಂಗಮ’ ಸಮ್ಮೇಳನ ನಡೆಯಲಿದೆ.
ನ.26 ರಂದು ಇಬಿಸು ಕನ್ವೆನ್ಷನ್ ಸೆಂಟರ್ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಸ್ಟಿಸ್ ಮಂಜುಳಾ ಚೆಲ್ಲೂರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಟ್ಟಾರೆ ಈ ಕಾರ್ಯಕ್ರಮಕ್ಕೆ 1500 ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ. ಸ್ಥಳೀಯ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳು, ಗೋವು ಉತ್ಪನ್ನಗಳ ಮಳಿಗೆಗಳೂ ಇರಲಿವೆ.