ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಅಹ್ಮಾದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಲಿದ್ದು, ಟೀಂ ಇಂಡಿಯಾ ಆಟಗಾರರು ಭಾರೀ ಭದ್ರತೆಯ ನಡುವೆ ಕ್ರೀಡಾಂಗಣ ತಲುಪಿದ್ದಾರೆ.
ಟೀಮ್ ಇಂಡಿಯಾಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕ್ರಿಕೆಟ್ ದಿಗ್ಗಜರು, ಸಿನಿರಂಗದ ನಟ-ನಟಿಯರು, ರಾಜಕೀಯ ಗಣ್ಯರು ಭಾರತ ಗೆಲ್ಲಲಿ ಎಂದು ಶುಭಕೋರಿದ್ದಾರೆ.
ಹೊಟೇಲ್‌ನಿಂದ ಮೈದಾನದತ್ತ ಆಟಗಾರರ ವಾಹನ ಹೋಗವ ದಾರಿಯುದ್ದಕ್ಕೂ ಅಭಿಮಾನಿಗಳ ಸಂಭ್ರಮ ಹೇಳತೀರದಾಗಿದೆ. ದಾರಿಯುದ್ದಕ್ಕೂ ʻಆಲ್ ದಿ ಬೆಸ್ಟ್ ಇಂಡಿಯಾʼ ಘೋಷಣೆಗಳು ಕೇಳಿಬಂದವು. ಶಿಳ್ಳೆ, ಚಪ್ಪಾಳೆಗಳೊಂದಿಗೆ ಟೀಂ ಇಂಡಿಯಾ ನಾಯಕರನ್ನು ಅಭಿಮಾನಿಗಳು ಹುರಿದುಂಬಿಸಿದರು.
The craze for Indian team in Ahmedabad 🇮🇳🔥pic.twitter.com/3NZwE3YbdR
— Johns. (@CricCrazyJohns) November 19, 2023