CINE| ʻತ್ರಿಶಾ ಬಳಿ ಕ್ಷಮೆ ಕೇಳೋದಿಲ್ಲ, ಆಕೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳು ನಟ ಮನ್ಸೂರ್ ಅಲಿ ಖಾನ್ (ಮನ್ಸೂರ್ ಅಲಿ ಖಾನ್) ಸಂದರ್ಶನವೊಂದರಲ್ಲಿನಟಿ ತ್ರಿಶಾ ಕುರಿತು ಹೇಳಿರುವ ಮಾತುಗಳು ಸದ್ಯ ಸಿನಿ ರಂಗದಲ್ಲಿ ಆರದ ಕೆಂಡವಾಗಿದೆ. ತ್ರಿಶಾ ಜತೆ ರೇಪ್ ಸೀನ್ ಇರುತ್ತೆ ಅಂತ ಅಂದುಕೊಂಡಿದ್ದೆ, ಆದರೆ ಇಲ್ಲದ್ದಕ್ಕೆ ಬೇಸರವಾಗಿದೆ ಎಂಬ ಮಾತಿಗೆತ್ರಿಶಾ ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದೀ ತ್ರಿಶಾ ವಿರುದ್ಧವೇ ಖಾನ್‌ ತಿರುಗಿಬಿದ್ದಿದ್ದಾರೆ.

ಇಡೀ ಸಂದರ್ಶನ ನೋಡದೆ ಮಾತನಾಡುತ್ತಿದ್ದಾರೆ, ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅವರೂ ಒಬ್ಬ ಹೆಣ್ಣು ಮಗಳು, ಕುಟುಂಬವಿದೆ, ನಾನು ಯಾವುದೇ ತಪ್ಪು ಕಾಮೆಂಟ್ ಮಾಡಿಲ್ಲ. ಕೆಲವರು ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಭಾರತ ನಟರ ಸಂಘ ಅವರಿಗೆ ಎಚ್ಚರಿಕೆಯ ನೋಟಿಸ್‌ಗಳನ್ನು ಕಳುಹಿಸಿದ್ದು, ತ್ರಿಷಾಗೆ ಉತ್ತರಿಸುವಂತೆ ಕೇಳಿದೆ.

ಇದಕ್ಕೆ ಉತ್ತರಿಸಿರುವ ಮನ್ಸೂರ್‌, ನಾನು ಸಂದರ್ಶನದಲ್ಲಿ ಕೇಳಿರುವ ಪ್ರಶ್ನೆಗಳಿಗಷ್ಟೇ ಉತ್ತರ ಕೊಟ್ಟಿದ್ದೇನೆ. ತಪ್ಪು ಕಾಮೆಂಟ್ ಮಾಡಿಲ್ಲ. ಈಗಾಗಲೇ ಸಿನಿಮಾ ಮಂದಿ ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ತ್ರಿಷಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಸಂಘವು ನನ್ನ ವಿವರಣೆಯನ್ನು ಕೇಳದೆ ಅಥವಾ ನನ್ನ ಮಾತನ್ನು ಕೇಳಲು ಅವಕಾಶವನ್ನು ನೀಡದೆ ಏಕೆ ನೋಟಿಸ್ ನೀಡಿದೆ ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರದಲ್ಲಿ ಕೆಲವರು ಮನ್ಸೂರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಈ ಹಿಂದೆಯೂ ಮನ್ಸೂರ್ ಅವರಿಗೆ ಅಂತಹ ಪಾತ್ರಗಳನ್ನು ನೀಡಿದ್ದು, ಈ ಚಿತ್ರದಲ್ಲಿಯೂ ಅಂತಹ ಪಾತ್ರವನ್ನು ನೀಡಲು ಬಯಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಕೆಲವರು ನೆಗೆಟಿವ್ ಆಗಿ ಪ್ರಚಾರ ಮಾಡಿ ಇಷ್ಟೊಂದು ದೊಡ್ಡ ವಿವಾದ ಸೃಷ್ಟಿಸಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!