ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿವಂಗತ ನಟಿ ಶ್ರೀದೇವಿ ತಮ್ಮ ಚಲನಚಿತ್ರಗಳೊಂದಿಗೆ ಸುಮಾರು ಕೆಲವು ದಶಕಗಳ ಕಾಲ ದಕ್ಷಿಣ ಮತ್ತು ಬಾಲಿವುಡ್ ಚಿತ್ರರಂಗವನ್ನು ಆಳಿದರು. ಜಾಹ್ನವಿ ಕಪೂರ್, ಶ್ರೀದೇವಿ ಉತ್ತರಾಧಿಕಾರಿಯಾಗಿ ಈಗಾಗಲೇ ಚಿತ್ರರಂಗ ಪ್ರವೇಶಿಸಿದ್ದಾರೆ. ಇದೀಗ ಅವರ ಎರಡನೇ ಪುತ್ರಿ ಖುಷಿ ಕೂಡ ಶೀಘ್ರದಲ್ಲೇ ನಾಯಕಿಯಾಗಿ ಪಾದಾರ್ಪಣೆ ಮಾಡಲಿದ್ದಾರೆ.
ಶ್ರೀದೇವಿ ಅವರ ಹಿರಿಯ ಮಗಳು ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಜಾಹ್ನವಿಗೆ ಇದುವರೆಗೂ ಒಂದೇ ಒಂದು ಕಮರ್ಷಿಯಲ್ ಹಿಟ್ ಸಿಕ್ಕಿಲ್ಲವಾದ್ದರಿಂದ ಇನ್ನೂ ಸ್ಟಾರ್ ಹೀರೋಯಿನ್ ಆಗಿಲ್ಲ ಎಂದೇ ಹೇಳಬಹುದು. ಈಗ ಎನ್‌ಟಿಆರ್ ಎದುರು ‘ದೇವರ’ ಈ ಚಿತ್ರದ ಮೂಲಕ ಜಾಹ್ನವಿ ಕಪೂರ್ ಟಾಲಿವುಡ್ ಪ್ರವೇಶಿಸಿದ್ದಾರೆ. ಈ ಸಿನಿಮಾದ ಜಾನ್ವಿಯ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದೆ.
ಈಗ ಶ್ರೀದೇವಿ ಅವರ ಮಗಳು ಖುಷಿ ಕಪೂರ್ ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ಫಾಲೋವರ್ಸ್ ಪಡೆದಿದ್ದಾರೆ. ಸದ್ಯದಲ್ಲೇ ‘ದಿ ಆರ್ಚೀಸ್’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಈಕೆ ತಮಿಳಿಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಇದೆ. ತಮಿಳು ನಟ ಅಥರ್ವ ಅವರ ಮುಂಬರುವ ಚಿತ್ರದಲ್ಲಿ ಖುಷಿ ಕಪೂರ್ ನಟಿಸಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.
ಖುಶಿ ಕಪೂರ್ ನಿಜವಾಗಿಯೂ ತಮಿಳು ಚಿತ್ರದ ಮೂಲಕ ಎಂಟ್ರಿ ಕೊಟ್ಟರೆ, ಅಕ್ಕ ಜಾನ್ವಿ ಜೊತೆಗೆ ಸೌತ್‌ಗೆ ಎಂಟ್ರಿ ಕೊಟ್ಟಂತೆ. ಶ್ರೀದೇವಿ ತಮಿಳು, ತೆಲುಗಿನಲ್ಲಿ ಫೇಮಸ್ ಆಗಿ ಸ್ಟಾರ್ ಹೀರೋಯಿನ್ ಆದರು. ತಾಯಿಯಂತೆ ಈ ಸಹೋದರಿಯರು ದಕ್ಷಿಣದಲ್ಲಿ ಸರಣಿ ಚಿತ್ರಗಳನ್ನು ಮಾಡಿ ಸ್ಟಾರ್ ಹೀರೋಯಿನ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕು.