ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ನೇಜಾರಿನ ತೃಪ್ತಿ ನಗರದ ಮನೆಯಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಬುಧವಾರ, ತನಿಖಾಧಿಕಾರಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಡಿ.5 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ನ.12 ರಂದು ಬೆಳ್ಳಂ ಬೆಳಗ್ಗೆ ಒಂದೇ ಕುಟುಂಬದ ತಾಯಿ ಮಕ್ಕಳು, ಮನೆಯಲ್ಲಿ ಕೊಲೆಯಾಗಿದ್ದರು. ತನಿಖೆಯಲ್ಲಿ ನಾಲ್ವರನ್ನು ಪ್ರವೀಣ್ ಹತ್ಯೆ ಮಾಡಿರುವುದಾಗಿ ಪತ್ತೆಯಾದ ಬೆನ್ನಲ್ಲೇ ಬೆಳಗಾವಿಯ ಕುಡುಚಿಯಲ್ಲಿ ಆತನನ್ನು ಬಂಧಿಸಿದ್ದರು.
ನ.15 ರಂದು ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಧೀಶರು ಹಾಗು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ಮುಂದೆ ಹಾಜರು ಪಡಿಸಿದ್ದು, 14 ದಿನಗಳವರೆಗೆ ಪೋಲಿಸ್ ಕಸ್ಟಡಿಗೆ ನೀಡಿದ್ದರು. ತನಿಖೆಯು ಪೂರ್ಣಗೊಂಡ ಹಿನ್ನಲೆಯಲ್ಲಿ ಆರು ದಿನ ಮುಂಚಿತವಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.