ಬಿಟ್​​ಕಾಯಿನ್​ ಪ್ರಕರಣ : 40 ಲಕ್ಷ ಕಳೆದುಕೊಂಡ ದೆಹಲಿ ವ್ಯಕ್ತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ನಿವಾಸಿಯೊಬ್ಬ ಹೆಚ್ಚಿನ ಆದಾಯದ ಆಕರ್ಷಣೆಗೆ ಒಳಗಾಗಿ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂ. ಹಣ ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದು, ಈ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ದೆಹಲಿಯ ನಿವಾಸಿಯೊಬ್ಬ ಅರೆಕಾಲಿಕ ಉದ್ಯೋಗ ಹುಡುಕುತ್ತಿದ್ದೀರಾ ಎನ್ನುವ ಸಂದೇಶವನ್ನು ಸೋಶಿಯಲ್​ ಮೀಡಿಯಾದಲ್ಲಿ ನೋಡಿದ್ದು, ನಂತರ ಈ ವ್ಯಕ್ತಿ ಉದ್ಯೋಗಕ್ಕಾಗಿ ಅವರನ್ನು ಸಂಪರ್ಕ ಮಾಡಿದ್ದಾರೆ. ನಂತರ ವಂಚಕ ಯೂಟ್ಯೂಬ್​​ ವಿಡಿಯೋ ಲಿಂಕ್​ವೊಂದನ್ನು ಕಳಿಸಿದ್ದಾನೆ. ನಂತರ ಕೆಲವು ದಿನಗಳ ನಂತರ ವಿಐಪಿ ಡೈಲಿ ಟಾಸ್ಕ್ ಎನ್ನುವ ಸೋಶಿಯಲ್​​ ಮೀಡಿಯಾ​​ ಗ್ರೂಪ್​​ಗೆ ಸೇರಿಸಲಾಯಿತ್ತು. ಬಳಿಕ ವಂಚಕ ದೆಹಲಿ ನಿವಾಸಿಗೆ ಬಿಟ್​ಕಾಯಿನ್​ ಬಗ್ಗೆ ಹೇಳಲು ಪ್ರಾರಂಭಿಸಿದ್ದಾನೆ. ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಹಣವನ್ನು ಲಾಭವಾಗಿ ಪಡೆಯಬಹುದು ಎಂದು ನಂಬಿಸಲು ಎಲ್ಲಿಲ್ಲದ ಕಸರತ್ತು ಮಾಡಿದ್ದಾನೆ. ಕೆಲವು ಟ್ರಾನ್​ಜೆಕ್ಷನ್​​ ಕೂಡಾ ಮಾಡಿದ್ದಾನೆ. ಇದರಿಂದ ಹೆಚ್ಚಿನ ಹಣ ಲಾಭ ಬರುವಂತೆ ಮಾಡಿದ್ದಾರೆ. ವ್ಯಕ್ತಿ ಈ ವ್ಯವಹಾರದ ನಂಬಿಕೆ ಬಂದಿದೆ. ನಂತರ ವಂಚಕ ಈತನಿಗೆ ಹಣ ಹೂಡಿಕೆ ಮಾಡುವಂತೆ ಮನವೊಲಿಸಿದ್ದಾನೆ.

ಹಣ ಹೂಡಿಕೆ ಮಾಡಿದ್ರೆ ಪ್ರತಿ ಠೇವಣಿಯನ್ನು ಕೆಲವು ಕಾರ್ಯಗಳಿಗೆ ನಿಯೋಗಿಸಲಾಗುತ್ತದೆ. ನಂತರ ಕ್ರೆಡಿಟ್​ ಸ್ಕೋರ್​ ಖಾತೆಯಲ್ಲಿ ಕಾಣಿಸುತ್ತಿದೆ. ಬಿಟ್​ಕಾಯಿನಿಂದ ನೀವು ಅಧಿಕ ಹಣ ಗಳಿಕೆ ಮಾಡಬಹದು ಎಂದು ಕಥೆ ಕಟ್ಟಿದ್ದಾನೆ. ಇದನ್ನು ನಂಬಿದ ವ್ಯಕ್ತಿ ಒಂದು ದಿನದಲ್ಲಿ 7.5 ಲಕ್ಷ ರೂ. ಕ್ಕಿಂತಲೂ ಹೆಚ್ಚು ಮೌಲ್ಯದ ವಹಿವಾಟು ಮಾಡಿದ್ದಾನೆ. ಆದರೆ ಎಲ್ಲಾ ಹಣವನ್ನು ಕಳೆದುಕೊಂಡಿದ್ದಾನೆ. ಹಣವನ್ನು ವಾಪಸ್​ ಕೊಡಿ ಎಂದು ಕೇಳಿದಾಗ ವಂಚಕರು ಮತ್ತೆ 20 ಲಕ್ಷ ರೂ. ಹೂಡಿಕೆ ಮಾಡಲು ಹೇಳಿದ್ದಾರೆ. ನಂತರ ಸಂತ್ರಸ್ತ ವ್ಯಕ್ತಿ ತನ್ನ ಹಣವನ್ನು ವಾಪಸ್​ ಪಡೆಯಲು ಮತ್ತೆ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಾನೆ. ಆದರೆ ಈತನ ಅರ್ಜಿಯನ್ನು ಪದೇ ಪದೇ ತಿರಸ್ಕರಿಸಲಾಗುತ್ತಿತ್ತು.

ವಂಚನೆಗೊಳಗಾದ ವ್ಯಕ್ತಿ ಹೀಗೆ ತನ್ನ ಹಣವನ್ನು ವಾಪಸ್​ ಪಡೆಯಲು ಹೋಗಿ 3 ದಿನಗಳಲ್ಲಿ 40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ತಾನೂ ವಂಚನೆಗೆ ಒಳಗಾಗಿರುವುದನ್ನು ಅರಿತ ವ್ಯಕ್ತಿ ಪೊಲೀಸ್​​ ಠಾಣೆಗೆ ಬಂದು ದೂರು ದಾಖಲಿಸಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!