CINE | ಕಾಂತಾರ-2 ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್, ಅಭಿಮಾನಿಗಳಲ್ಲಿ ಭಾರೀ ಕುತೂಹಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರಾ ಸಿನಿಮಾ ಫ್ಯಾನ್ಸ್‌ಗೆ ಶುಭಸುದ್ದಿಯೊಂದು ಸಿಕ್ಕಿದ್ದು, ಕಾಂತಾರ-೨ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಬಿಗ್ ಅಪ್‌ಡೇಟ್ ನೀಡಿದೆ.

ಈ ಹಿಂದೆ ಕಾಂತಾರ ಪ್ರೀಕ್ವೆಲ್ ಬರುತ್ತದೆ ಅನ್ನೋ ಮಾಹಿತಿಯಷ್ಟೇ ಇತ್ತು, ಪ್ರಾಜೆಕ್ಟ್ ಆರಂಭವಾಗಿದೆಯಾ? ಬೆಳವಣಿಗೆಗಳೇನು ಅನ್ನೋ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಇದೀಗ ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಬಿಗ್ ಅನೌನ್ಸ್‌ಮೆಂಟ್ ಮಾಡಿದೆ.

ಇದೇ ತಿಂಗಳ 27 ರಂದು ಮಧ್ಯಾಹ್ನ 12:55ಕ್ಕೆ ಕಾಂತಾರ-2 ಸಿನಿಮಾದ ಮೊದಲ ಪೋಸ್ಟರ್ ಅನಾವರಣಗೊಳ್ಳಲಿದೆ. ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜೊತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ, ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ ಇದು ಬರೀ ಬೆಳಕಲ್ಲ ದರ್ಶನ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!