ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡದಲ್ಲಿ ಮನೆಯ ಮುಂದೆ ಕ್ರಿಕೆಟ್ ಆಡುತ್ತಿದ್ದ ಬಾಲಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ.
ಸಿದ್ದರಾಮಯ ಕಾಲೋನಿಯಲ್ಲಿ ಶ್ರೇಯಸ್ ಹಾಗೂ ಆತನ ಸ್ನೇಹಿತನ ಜೊತೆ ಮಹಡಿ ಮೇಲೆ ಕ್ರಿಕೆಟ್ ಆಡುತ್ತಿದ್ದ ವೇಳೆ ಬಾಲ್ ಕ್ಯಾಚ್ ಹಿಡಿಯುವಾಗ ವಿದ್ಯುತ್ ತಂತಿ ತಗುಲಿದೆ.
ತಕ್ಷಣವೇ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ, ಆತನ ಸ್ನೇಹಿತನಿಗೂ ಗಾಯಗಳಾಗಿವೆ.