ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಬಿಳಿ, ಕಂದು, ಕಪ್ಪು ಬಣ್ಣದ ಕುದುರೆಗಳ ಬಗ್ಗೆ ಕೇಳಿರುತ್ತೀರ..ನೋಡಿರುತ್ತೀರ. ಆದರೆ ಬಂಗಾರದ ಕುದುರೆಗಳ ಬಗ್ಗೆ ತಿಳಿದಿದ್ಯಾ? ಗೊತ್ತಿಲ್ಲ ಅಂದ್ರೆ ಇದನ್ನೊಮ್ಮೆ ಓದಿ..
ಇವುಗಳನ್ನು ಅಖಲ್-ಟೆಕೆ ಟರ್ಕ್ಮೆನ್ ಕುದುರೆ ಎಂದು ಕರೆಯಲಾಗುತ್ತದೆ. ಇವುಗಳಿರುವ ಇನ್ನೊಂದು ಹೆಸರೇ ʻಚಿನ್ನದ ಕುದುರೆʼ ಎಂದು. ಇದು ತುರ್ಕಮೆನಿಸ್ತಾನದ ಕರಕುಮ್ ಮರುಭೂಮಿಯಲ್ಲಿ ಕಂಡುಬರುತ್ತದೆ. ಇವುಗಳನ್ನು ಟೆಕೆ ಬುಡಕಟ್ಟು ಜನಾಂಗದವರು ಅಖಾಲ್ ಮರುಭೂಮಿಯಲ್ಲಿ ಸಾವಿರಾರು ವರ್ಷಗಳ ಹಿಂದೆ ಈ ತಳಿಯ ಕುದುರೆಗಳನ್ನು ಪೋಷಿಸಿದ್ದು, ಹೀಗಾಗಿ ಈ ತಳಿಗೆ ಈ ಹೆಸರು ಬಂದಿದೆ.
ಇತಿಹಾಸ
ಇವು ನೋಡಲು ಸೂರ್ಯನ ಬೆಳಕಿನಲ್ಲಿ ಹೊಳೆಯುವ ಚಿನ್ನವನ್ನು ಹೋಲುವ ಹಾಗೆ ಕಾಣುತ್ತದೆ. ತುರ್ಕಮೆನ್ ಮರುಭೂಮಿಗಳಿಂದ ಹುಟ್ಟಿಕೊಂಡ ಈ ಕುದುರೆಗಳು ತಮ್ಮ ಶಕ್ತಿ, ಬುದ್ದಿವಂತಿಕೆ ಮತ್ತು ವೇಗಕ್ಕೆ ಹೆಸರುವಾಸಿಯಾಗಿವೆ. ಇದರ ಇತಿಹಾಸ ನೋಡುವುದಾದರೆ, ಸುಮಾರು 3000 ವರ್ಷಗಳ ಹಿಂದಿನದು ಎಂದು ಉಲ್ಲೇಖಿಸಲಾಗಿದೆ.
ಅಖಲ್-ಟೆಕೆ ಚರ್ಮವು ತುರ್ಕಮೆನ್ ಜನರ ದೈಹಿಕ ಸಾಮರ್ಥ್ಯವನ್ನು ಮಾತ್ರವಲ್ಲದೆ ಅವರ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ. ಈ ಕುದುರೆ ಹೇಗಿದೆ ಎಂದು ನೀವೂ ನೋಡಿ..
This is a rare Akhal-Teke Turkmen horse breed. The shiny coat of the breed led to their nickname, “Golden Horses” pic.twitter.com/ZQZKueYLpK
— Gabriele Corno (@Gabriele_Corno) November 22, 2023