HEALTH| ತೆಂಗಿನ ಹಾಲಿನಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆಣ್ಮಕ್ಕಳಿಗೆ ಅಂದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಚರ್ಮ, ತಲೆಕೂದಲು ಆರೈಕೆಗಾಗಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ಆದರೆ ನೈಸರ್ಗಿಕವಾಗಿ ಸಿಗುವ ತೆಂಗಿನಕಾಯಿ ಹಾಲಿನಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.

ಹತ್ತಿ ಉಂಡೆಗಳನ್ನು ತೆಂಗಿನ ಹಾಲಿನಲ್ಲಿ ನೆನೆಸಿ ಮುಖಕ್ಕೆ ಹಚ್ಚಿ ಒಣಗಿಸಿ ತಣ್ಣೀರಿನಿಂದ ತೊಳೆಯಿರಿ. ಅಲ್ಲದೆ ತೆಂಗಿನ ಹಾಲು, ಜೇನುತುಪ್ಪ ಮತ್ತು ಮೊಟ್ಟೆಯ ಫೇಸ್ ಮಾಸ್ಕ್ ಅನ್ನು ಹಚ್ಚುವುದರಿಂದ ಚರ್ಮವು ತೇವ ಮತ್ತು ಮೃದುವಾಗುತ್ತದೆ.
ಹಾಗೆಯೇ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಉದ್ದ ಕೂದಲಿಗೆ ತೆಂಗಿನ ಹಾಲು, ಮೊಟ್ಟೆ ಮತ್ತು ಮೊಸರು ಹಾಕಿ ಹೇರ್ ಮಾಸ್ಕ್ ಹಾಕಿದರೆ ಒಳ್ಳೆಯದು..ಕೂದಲಿನ ಸಮಸ್ಯೆಗಳು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

ತೆಂಗಿನ ಹಾಲು ತೇವಾಂಶ ಕಳೆದುಕೊಳ್ಳುವುದಿಲ್ಲ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಮಾಡಿದರೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ. ತೆಂಗಿನ ಹಾಲು ವಿಶೇಷವಾಗಿ ಚಳಿಗಾಲದಲ್ಲಿ ತುಂಬಾ ಉಪಯುಕ್ತವಾಗಿದೆ. ಚಳಿಗಾಲದಲ್ಲಿ ಕೆನ್ನೆಯ ಬಿರುಕುಗಳು, ಶುಷ್ಕತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!