ಹೊಸ ದಿಗಂತ ಡಿಜಿಟಲ್ ಡೆಸ್ಕ್ :
ಮಂಗಳೂರು ನಗರದ ಪಂಪ್ವೆಲ್ ಬಳಿ ಕೋಟ್ಯಂತರ ರೂಪಾಯಿ ಮೌಲ್ಯವಿರುವ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಮಾರಾಟಕ್ಕೆ ಯತ್ನಿಸುತ್ತಿದ್ದ ಮೂರು ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಬಂಧಿತರಿಂದ ಒಟ್ಟು 1.62 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮೂಲತಃ ಚಿಕ್ಕಮಗಳೂರು ತಮಿಳು ಕಾಲನಿ ನಿವಾಸಿ, ಪ್ರಸಕ್ತ ಬಂಟ್ವಾಳ ಮಂಗಲಪದವು ಪಾತಿರತೋಟ ಬಾಡಿಗೆ ಮನೆಯಲ್ಲಿರುವ ಪ್ಯಾರೇಜಾನ್ ಯಾನೆ ಸೇಟು(37), ಪಾತಿರತೋಟ ನಿವಾಸಿ ಬದ್ರುದ್ದೀನ್ ಯಾನೆ ಬದ್ರು(28)ಹಾಗೂ ತಮಿಳುನಾಡು ಸನ್ನಿಧಿ ಕೋಯಿಲ್ ಟೆಂಪಲ್ ಸ್ಟ್ರೀಟ್ ನಿವಾಸಿ ರಾಜೇಶ್(22) ಬಂಧಿತರು.
ಆರೋಪಿಗಳಿಂದ 1.57 ಕೋಟಿ ರೂ. ಮೌಲ್ಯದ 1.575 ಕೆಜಿ ತೂಕದ ಅಂಬರ್ ಗ್ರೀಸ್, ಸಾಗಾಟಕ್ಕೆ ಉಪಯೋಗಿಸಿದ ಮಾರುತಿ ಸ್ವಿಫ್ಟ್ ಕಾರು ಹಾಗೂ 3 ಮೊಬೈಲ್ ಫೋನ್ ವಶಪಡಿಸಲಾಗಿದೆ.