ದೇಶದಲ್ಲಿ ಮಾರಾಟವಾಗುತ್ತಿರುವ ಶೇ.99.2ರಷ್ಟು ಮೊಬೈಲ್ ಗಳು ಮೇಡ್ ಇನ್ ಇಂಡಿಯಾ: ಸಚಿವ ಅಶ್ವಿನಿ ವೈಷ್ಣವ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮೇಡ್ ಇನ್ ಇಂಡಿಯಾ ಬಗ್ಗೆ ಭಾರತ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಇತ್ತೀಚಿನ ಪುರಾವೆಗಳನ್ನ ನೀಡಿದ್ದಾರೆ. ಮೊಬೈಲ್ ಉದ್ಯಮದಲ್ಲಿ ಮೋದಿ ಸರ್ಕಾರದ ಸಾಧನೆಯನ್ನ ಘೋಷಿಸಿದ ಅಶ್ವಿನಿ ವೈಷ್ಣವ್, ಕೇವಲ 9 ವರ್ಷಗಳಲ್ಲಿ ಭಾರತದಲ್ಲಿ ಮೊಬೈಲ್ ಉತ್ಪಾದನೆ 20 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

ಮೊಬೈಲ್ ಉದ್ಯಮದ ತಜ್ಞರೊಂದಿಗಿನ ಸಭೆಯ ನಂತರ ಅವರು ‘ಎಕ್ಸ್’ನಲ್ಲಿ ಈ ಮಾಹಿತಿ ನೀಡಿದ್ದಾರೆ.

2014ರಲ್ಲಿ ದೇಶದ ಮೊಬೈಲ್ ಉದ್ಯಮದ 78 ಪ್ರತಿಶತದಷ್ಟು ಆಮದುಗಳ ಮೇಲೆ ಅವಲಂಬಿತವಾಗಿತ್ತು ಮತ್ತು ಇಂದು, ಒಂಬತ್ತು ವರ್ಷಗಳ ನಂತರ, 2023ರಲ್ಲಿ ಭಾರತದಲ್ಲಿ ಮಾರಾಟವಾದ ಶೇ. 99.2ರಷ್ಟು ಮೊಬೈಲ್ ಗಳು ‘ಮೇಡ್ ಇನ್ ಇಂಡಿಯಾ’ ಆಗಿವೆ. ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಿದೆ ಎಂದರು.

ಭಾರತದಲ್ಲಿ ಮಾರಾಟವಾಗುವ ಶೇ. 99.2ರಷ್ಟು ಫೋನ್ ಗಳು ಮೇಡ್ ಇನ್ ಇಂಡಿಯಾದ ಸ್ಟಾಂಪ್ ಅನ್ನು ಹೊಂದಿವೆ, ಇದು ಪ್ರತಿಯೊಬ್ಬ ದೇಶವಾಸಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಚಿವರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!