ದಿನಭವಿಷ್ಯ| ಮನೆಯಲ್ಲಿ ಹಿರಿಯರ ಜತೆ ವಾಗ್ವಾದ ನಡೆದೀತು, ತಾಳ್ಮೆ ಕಳಕೊಳ್ಳದಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಮಾತು ಕಡಿಮೆ, ಹೆಚ್ಚು ಕೆಲಸ – ಈ ನೀತಿಯನ್ನು ನೀವು ಅನುಸರಿಸಬೇಕು. ಪ್ರೀತಿಪಾತ್ರರಲ್ಲಿ ಯಾವುದೇ ವಿಷಯ ಮುಚ್ಚಿಡಬೇಡಿ. ಅದು ಬಳಿಕ ಸಮಸ್ಯೆ ತಂದೀತು.

ವೃಷಭ
ಯಾವುದೇ ವಿಷಯದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ಅಂದಾಜಿಸಿ ಬಳಿಕ ನಿರ್ಧಾರ ತಾಳಿರಿ. ದುಡುಕಿನ ನಿರ್ಧಾರ ಒಳಿತಲ್ಲ. ಕೌಟುಂಬಿಕ ಪರಿಸ್ಥಿತಿ ಶಾಂತಿಯುತ.

ಮಿಥುನ
ನಿಮ್ಮ ಕಾರ್ಯಗಳೆಲ್ಲ ಉದ್ದೇಶಿತ ಕಾಲಮಿತಿಯಲ್ಲಿ ಮುಗಿಯುವವು. ಅದರಿಂದ ನಿರಾಳತೆ. ಪ್ರೀತಿಪಾತ್ರರ ಜತೆ ಒಡನಾಟ.

ಕಟಕ
ವೃತ್ತಿ ಬದುಕಿನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಪ್ರಸಂಗ ಒದಗೀತು. ಅದಕ್ಕೆ ಒಗ್ಗಿಕೊಳ್ಳಿ. ಆತ್ಮೀಯರ ವರ್ತನೆ ನೋವು ತರಬಹುದು.

ಸಿಂಹ
ಕೆಲವು ನಿರ್ಧಾರದ ಬಗ್ಗೆ ಮರುಚಿಂತನೆ ನಡೆಸಿರಿ. ಅದು ನಿಮಗೆ ಒಳಿತು ತರುವುದೆ ಎಂದು ಚಿಂತಿಸಿ. ಆದಾಯ ಮತ್ತು ವೆಚ್ಚದಲ್ಲಿ ಸಮತೋಲನ ಸಾಧಿಸಿರಿ.

ಕನ್ಯಾ
ನಿಮ್ಮ ಯೋಚನೆ ನಿರೀಕ್ಷಿಸಿದಂತೆ ಸಫಲವಾಗದು. ಅದರ ಕುರಿತೇ ಹೆಚ್ಚು ಚಿಂತಿಸದಿರಿ. ಭಾವುಕ ಸನ್ನಿವೇಶಕ್ಕೆ ಸಿಲುಕುವ ಸಾಧ್ಯತೆಯಿದೆ.

ತುಲಾ
ಹೊಸ ಸಂಬಂಧ ಬೆಳೆಸದಿರಿ. ನಿಮ್ಮನ್ನು ಪ್ರೀತಿಸುವವರನ್ನು ಕಡೆಗಣಿಸಬೇಡಿ.ಕೆಲವರು ನಿಮ್ಮ ಒಳ್ಳೆತನ ದುರ್ಬಳಕೆ ಮಾಡುವ ಸಾಧ್ಯತೆಯಿದೆ.

ವೃಶ್ಚಿಕ
ಹೊಸ ವ್ಯವಹಾರದಲ್ಲಿ ಹಣ ಹೂಡುವುದು ಪ್ರತಿಕೂಲವಾದೀತು.
ಆಪ್ತ ಬಂಧುಗಳ ಅಸಮಾಧಾನ ಎದುರಿಸುವಿರಿ. ತಾಳ್ಮೆಯಿಂದ ವ್ಯವಹರಿಸಿ.

ಧನು
ಮನೆಯಲ್ಲಿ ಹಿರಿಯರ ಜತೆ ವಾಗ್ವಾದ ನಡೆದೀತು.ನೀವು ತಾಳ್ಮೆ ಕಳಕೊಳ್ಳದಿರಿ. ಸಮಾಧಾನದಿಂದ ಪರಿಸ್ಥಿತಿ ನಿಭಾಯಿಸಿ. ಖರ್ಚು ಅಧಿಕ.

ಮಕರ
ಕುಟುಂಬದ ಹಿತಾಸಕ್ತಿ ಕಾಯುವಲ್ಲಿ ಹೆಚ್ಚು ಕಾಳಜಿ ವಹಿಸಿರಿ. ಅಸಮಾಧಾನ ಇದ್ದರೆ ನಿವಾರಿಸಲು ಪ್ರಯತ್ನಿಸಿ. ಎಲ್ಲವೂ ಸುಸೂತ್ರವಾಗುವುದು.

ಕುಂಭ
ಉದ್ಯೋಗದಲ್ಲಿ ಸಫಲತೆ. ಆದರೂ ಹೊಸ ಸಮಸ್ಯೆ ನಿಮಗೆ ಎದುರಾಗುವುದು. ಆಪ್ತರೊಡನೆ ಮಾತಿನ ಚಕಮಕಿ ನಡೆಯಬಹುದು.

ಮೀನ
ಸಂಬಂಧದಲ್ಲಿ ವಿನಾಕಾರಣ ಹುಳುಕು ಹುಡುಕಬೇಡಿ. ಹಿರಿಯರ ಜತೆ ವಾಗ್ವಾದ ಮಾಡಲು ಹೋಗಬೇಡಿ. ವಾಗ್ವಾದಕ್ಕಿಂತ ಹೊಂದಾಣಿಕೆ ಒಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!