ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಮತ್ತೊಂದು ಹಿಂದೂ ದೇವಾಲಯ ನೆಲಸಮ ಮಾಡಿದ್ದು, ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿದ್ದ ಪುರಾಣ ಪ್ರಸಿದ್ಧ ಮಾತಾ ಮಂದಿರವನ್ನು ಕಾಫಿ ಹೌಸ್ ನಿರ್ಮಾಣಕ್ಕಾಗಿ ನೆಲಸಮ ಮಾಡಲಾಗಿದೆ. ಹಿಂಗ್ಲಾಜ್ ಮಾತಾ ಮಂದಿರಕ್ಕೆ ಐತಿಹಾಸಿಕ ಪ್ರಾಮುಖ್ಯತೆ ಇದೆ. ಪಾಕ್ ಅಧಿಕಾರಿಗಳು ನ್ಯಾಯಾಲಯದ ಆದೇಶದ ಮೇರೆಗೆ ಕಟ್ಟಡವನ್ನು ನೆಲಸಮ ಮಾಡಿದ್ದಾರೆ.
ಮಿಥಿ ನಗರವಾಸಿಗಳು ದೇಗುಲವನ್ನು ಧ್ವಂಸ ಮಾಡುತ್ತಿರುವುದಕ್ಕೆ ಸ್ಥಳದಲ್ಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿ ಮಾತಾ ಮಂದಿರ ಕೆಡವಬೇಡಿ ಎಂದಿದ್ದಾರೆ.