ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲ್ಕ್ಯಾರ ಟನಲ್‌ನಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆಂದು ಬಂದಿದ್ದ ಅಗರ್ ಯಂತ್ರಕ್ಕೆ ಹಾನಿಯಾಗಿದೆ. ಇದರಿಂದಾಗಿ ಕಾರ್ಯಾಚರಣೆಗೆ ಹಿನ್ನೆಲೆ ಉಂಟಾಗಿದೆ. ಇದೀಗ ಅಗರ್ ಯಂತ್ರದ ದುರಸ್ತಿಗಾಗಿ ಹೈದರಾಬಾದ್‌ನಿಂದ ಪ್ಲಾಸ್ಮಾ ಕಟರ್‌ನ್ನು ತರಿಸಲಾಗಿದೆ.
ಅಗರ್ ಯಂತ್ರವನ್ನು ಸಂಪೂರ್ಣವಾಗಿ ಬೇರ್ಪಡಿಸಬೇಕಿದೆ. ಇದೀಗ ಡ್ರಿಲ್ ಯಂತ್ರದ ಒಂದು ಭಾಗ ಬೆಟ್ಟದ ಮೇಲೆ, ಸುರಂಗದ ಮೇಲೆ ಕಳುಹಿಸಲಾಗಿದೆ.
ಕಾರ್ಮಿಕರು ಸುರಂಗದೊಳಗೆ ಸಿಲುಕಿ ಈಗಾಗಲೇ 14 ದಿನಗಳಾಗಿದ್ದು, ಕ್ರಿಸ್‌ಮಸ್ ವೇಳೆಗೆ ಕಾರ್ಮಿಕರು ಹೊರಗೆ ಬರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.