ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲವು ಅಡೆತಡೆಗಳನ್ನು ಮೀರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾ ಐಪಿಎಸ್ ಅಧಿಕಾರಿಯಾದ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಸಿನಿಮಾ 12thಫೇಲ್ ಪ್ರತಿಷ್ಠಿತ ಆಸ್ಕರ್ ರೇಸ್‌ನಲ್ಲಿದೆ.
ಹೌದು, ಈ ಬಗ್ಗೆ ನಟ ವಿಕ್ರಾಂತ್ ಮೆಸ್ಸಿ ಮಾಹಿತಿ ನೀಡಿದ್ದು, ನಮ್ಮ ಸಿನಿಮಾವನ್ನು ಆಸ್ಕರ್ ಸ್ಪರ್ಧೆಗೆ ಕಳುಹಿಸಲಾಗಿದೆ.
ಭಾರತೀಯರು ಕೂಡ ಆಸ್ಕರ್ ಗೆಲ್ಲಬಹುದು ಎಂಬುದಕ್ಕೆ ಆರ್‌ಆರ್‌ಆರ್ ಸಿನಿಮಾ ಸಾಕ್ಷಿಯಾಗಿದೆ. ಇದೀಗ ನಮ್ಮ ಸಿನಿಮಾ ಕೂಡ ಆಸ್ಕರ್ ರೇಸ್‌ನಲ್ಲಿದ್ದು, ಸಿನಿಮಾ ಆಯ್ಕೆ ಬಗ್ಗೆ ಕುತೂಹಲ ಇದೆ ಎಂದು ಮೆಸ್ಸಿ ಹೇಳಿದ್ದಾರೆ.