ತ್ರಿಶಾ, ಚಿರಂಜೀವಿ, ಖುಷ್ಬೂ ಗೆ ಸಂಕಷ್ಟ: ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ಮನ್ಸೂರ್ ಅಲಿ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳು ನಟಿ ತ್ರಿಶಾ ಕೃಷ್ಣನ್​​ ಬಗ್ಗೆ ಮಾಡಿದ್ದ ಕಾಮೆಂಟ್‌ಗಳಿಂದಾಗಿ ವಿವಾದದಲ್ಲಿ ಸಿಲುಕಿಕೊಂಡಿದ್ದ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಸಿನಿಮಾ ವಲಯದ ಹಲವಾರು ತೀವ್ರವಾಗಿ ಖಂಡಿಸಿದ್ದರು.

ಇದಾದ ಬಳಿಕ ಮನ್ಸೂರ್ ಅಲಿ ಖಾನ್ ಸಾರ್ವಜನಿಕವಾಗಿ ನಟಿಯಲ್ಲಿ ಕ್ಷಮೆಯಾಚಿಸಿದ್ದರು.

ಇದೀಗತ್ರಿಶಾ ಕೃಷ್ಣನ್, ಬಿಜೆಪಿ ನಾಯಕಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಖುಷ್ಬೂ ಸುಂದರ್ ಮತ್ತು ಟಾಲಿವುಡ್​ ಮೆಗಾಸ್ಟಾರ್ ಚಿರಂಜೀವಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಮನ್ಸೂರ್ ಘೋಷಿಸಿದ್ದಾರೆ.

ತಮ್ಮ ವಕೀಲರಾದ ಗುರು ಧನಂಜೇಯನ್ ಅವರ ಮೂಲಕ ಕಾನೂನು ಕ್ರಮ ಕೈಗೊಳ್ಳುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ನವೆಂಬರ್ 11 ರಂದು ನಡೆದ ಮಾಧ್ಯಮಗೋಷ್ಟಿಯ ಮೂಲ ವಿಡಿಯೋವನ್ನೂ ಹೊಂದಿರುವುದಾಗಿ ಬಹಿರಂಗಪಡಿಸಿದ್ದಾರೆ. ನಟಿ ತ್ರಿಶಾ ಅವರ ಬಗ್ಗೆ ತಮ್ಮ ಕಾಮೆಂಟ್‌ಗಳನ್ನು ತಪ್ಪಾಗಿ ಪ್ರತಿನಿಧಿಸುವ ವಿಡಿಯೋ ವೈರಲ್​ ಆಗಿದೆ ಎಂದು ಉಲ್ಲೇಖಿಸಿದ್ದಾರೆ. ಹೆಚ್ಚುವರಿ ಸಾಕ್ಷ್ಯಗಳೊಂದಿಗೆ ಪ್ರಕರಣವನ್ನು ದಾಖಲಿಸುವ ಯೋಜನೆಯನ್ನು ಖಾನ್ ಪ್ರಸ್ತಾಪಿಸಿದ್ದಾರೆ.

ನಟಿ ತ್ರಿಶಾ ಕೃಷ್ಣನ್​​ ಕುರಿತ ಮನ್ಸೂರ್ ಅಲಿ ಖಾನ್ ಹೇಳಿಕೆ ವೈರಲ್​ ಆದ ಬೆನ್ನಲ್ಲೇ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಸ್ವತಃ ತ್ರಿಶಾ ಕೃಷ್ಣನ್ ಅವರೇ ಅಸಮಾಧಾನ ಹೊರಹಾಕಿದ ಹಿನ್ನೆಲೆ ಪ್ರಕರಣ ತೀವ್ರ ಸ್ವರೂಪ ಪಡೆಯಿತು. ನಂತರ ಖುಷ್ಬೂ ಸುಂದರ್, ನಿರ್ದೇಶಕ ಲೋಕೇಶ್​ ಕನಕರಾಜ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಹಲವರು ನಟನ ವಿರುದ್ಧ ಅಸಮಾಧಾನ ಹೊರಹಾಕಿ ಸೋಷಿಯಲ್​ ಮೀಡಿಯಾ ಪೋಸ್ಟ್ ಶೇರ್ ಮಾಡಿದ್ದರು. ಇದೀಗ ತ್ರಿಶಾ ಕೃಷ್ಣನ್​​, ಖುಷ್ಬೂ ಸುಂದರ್, ಚಿರಂಜೀವಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪೋಷಕ ನಟ ಮನ್ಸೂರ್ ಅಲಿ ಖಾನ್ ತಯಾರಿ ನಡೆಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!