ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ ಹಾಫ್ ಸೆಂಚುರಿ ಅಬ್ಬರದ ಆಟದಿಂದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 4 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಿದರು. ಜೈಸ್ವಾಲ್ 25 ಎಸೆತದಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 53 ರನ್ ಸಿಡಿಸಿದರು.
ಬಳಿಕ ಗಾಯಕ್ವಾಡ್ ಹಾಗೂ ಇಶಾನ್ ಇಬ್ಬರೂ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇಶಾನ್ ಕಿಶನ್ 32 ಎಸೆತದಲ್ಲಿ 52 ರನ್ ಸಿಡಿಸಿದರು. ಇಶಾನ್ ಕಿಶನ್ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಬ್ಬರಿಸಿದರು. ಸೂರ್ಯಕುಮಾರ್ ಯಾದವ್, 2ನೇ ಪಂದ್ಯದಲ್ಲಿ 19 ರನ್ ಸಿಡಿಸಿ ಔಟಾದರು.
ಅಂತಿಮ ಹಂತದಲ್ಲಿ ರುತುರಾಜ್ ಗಾಯಕ್ವಾಡ್ 58 ರನ್ ಸಿಡಿಸಿ ಔಟಾದರು. ರಿಂಕು ಸಿಂಗ್ ಹಾಗೂ ತಿಲಕ್ ವರ್ಮಾ ಜೊತೆಯಾಟ ಟೀಂ ಇಂಡಿಯಾ ರನ್ ವೇಗ ಹೆಚ್ಚಿಸಿತು. ಬೌಂಡರಿ ಹಾಗೂ ಸಿಕ್ಸರ್ ಅಬ್ಬರದಿಂದ ಭಾರತ 4 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿತು. ರಿಂಕು ಸಿಂಗ್ 9 ಎಸೆತದಲ್ಲಿ ಅಜೇಯ 31 ರನ್ ಸಿಡಿಸಿದರೆ. ತಿಲಕ್ ವರ್ಮಾ 2 ಎಸೆತದಲ್ಲಿ ಅಜೇಯ 7 ರನ್ ಸಿಡಿಸಿದರು.