ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ಆಟವಾಡುವ ವೇಳೆ ಏನಾದರು ಒಂದು ಅವಘಡಗಳು ಸಂಭವಿಸುವುದರ ಬಗ್ಗೆ ಕೇಳಿರುತ್ತೇವೆ. ಅದೇ ರೀತಿಯಾಗಿ ಮಕ್ಕಳ ಕೈಗೆ ಕೊಡುವ ಬಲೂನ್ನಿಂದ ಒಂದು ಜೀವವೇ ಹೋದ ಘಟನೆ ಮಹಾರಾಷ್ಟ್ರದ ಪಾಲ್ಘಡದಲ್ಲಿ ನಡೆದಿದೆ.
ಮೂರು ವರ್ಷದ ಬಾಲಕನೊಬ್ಬ ಆಟವಾಡುವ ವೇಳೆ ಬಲೂನ್ ನುಂಗಿದ್ದಾನೆ. ಏಕಾಏಕಿ ಅಸ್ವಸ್ಥಗೊಂಡ ಕಾರಣ ಪೋಷಕರು ಇತರ ಮಕ್ಕಳನ್ನು ವಿಚಾರಿಸಿದ್ದಾರೆ. ಆಗ ಮಗು ಬಲೂನ್ ನುಂಗಿರುಸುವುದು ಗೊತ್ತಾಗಿದೆ.
ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ.
ಮಕ್ಕಳನ್ನು ಎಷ್ಟೇ ಕಾಳಜಿಯಿಂದ ನೋಡಿಕೊಂಡರೂ ಸಹ ಇಂತಹ ದುರಂತಗಳು ನಡೆಯುತ್ತವೆ. ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯ.