ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಣಸೆ ಹಣ್ಣು ಈ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಹುಳಿ ಇಲ್ಲದೆ ಅಡುಗೆ ರುಚಿಯೇ ಇರುವುದಿಲ್ಲ. ಹುಣಸೆಹಣ್ಣಿನ ಜೊತೆ ಸ್ವಲ್ಪ ಉಪ್ಪು, ಬೆಲ್ಲ. ಜೀರಿಗೆ ಕುಟ್ಟಿ ತಿಂದರೆ ಆಹಾ ಸ್ವರ್ಗ ಸುಖ. ಆದರೆ ಈ ಹಣ್ಣನ್ನು ಹೆಚ್ಚಾಗಿ ತಿಂದರೆ ಆರೋಗ್ಯ ಸಮಸ್ಯಗಳು ಬಾಧಿಸುತ್ತವೆ.
- ಹುಣಸೆ ಹಣ್ಣು ಹುಳಿಯಾಗಿರುವುದರಿಂದ ಹಲ್ಲಿನ ಸಮಸ್ಯೆ ಉಂಟಾಗುತ್ತದೆ. ಹಲ್ಲಿನ ಸಮಸ್ಯೆ ಇರುವವರು ಹೆಚ್ಚು ಹುಣಸೆಹಣ್ಣು ತಿಂದರೆ ನೋವು ಜಾಸ್ತಿಯಾಗುತ್ತದೆ.
- ಮಹಿಳೆಯರು ಮುಟ್ಟಿನ ಸಮಯದಲ್ಲಿ ಹುಣಸೆಹಣ್ಣು ತಿನ್ನಬಾರದು. ಋತುಸ್ರಾವದ ಸಮಯದಲ್ಲಿ ಇದರ ಸೇವನೆ ಹೊಟ್ಟೆ ನೋವು ತೀವ್ರವಾಗಲು ಸಹಾಯ ಮಾಡುತ್ತದೆ.
- ಅಜೀರ್ಣ ಅಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ.
- ಹುಣಸೆ ಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟು ಮಾಡುತ್ತದೆ.
- ಬೆಳ್ಳಂ ಬೆಳಗ್ಗೆ ಹುಣಸೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ