ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮತ್ತು ಚೀನಾದ ಪ್ರವಾಸಿಗರಿಗೆ 30 ದಿನಗಳ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಘೋಷಿಸಿದೆ. ಡಿಸೆಂಬರ್ 1ರಿಂದ ಈ ಅವಕಾಶ ಜಾರಿಗೆ ಬರಲಿದೆ.
ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಆರ್ಥಿಕ ಒಳಹರಿವಿನ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಹೇಳಿದ್ದಾರೆ.
ಪ್ರವಾಸಿಗರು ವೀಸಾ ಇಲ್ಲದೆ 30 ದಿನಗಳ ಕಾಲ ಮಲೇಷ್ಯಾದಲ್ಲಿ ಉಳಿಯಬಹುದು. ಆದರೆ
ವೀಸಾ ಮುಕ್ತವಾಗಿದ್ದರೂ ಪ್ರವಾಸಿಗರು ನಿಗದಿತ ಭದ್ರತಾ ತಪಾಸಣೆಗಳನ್ನು ಪೂರೈಸಲೇಬೇಕು ಎಂದು ಅವರು ತಿಳಿಸಿದ್ದಾರೆ.
ಈ ಮೂಲಕ ಏಷ್ಯಾ ಖಂಡದ 8 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಮಲೇಷ್ಯಾ ಸರ್ಕಾರ ಕಲ್ಪಿಸಿದೆ. ಭಾರತ ಮತ್ತು ಚೀನಾದ ಪ್ರವಾಸಿಗರು ಮತ್ತು ಹೂಡಿಕೆದಾರರನ್ನು ಉತ್ತೇಜಿಸಲು ವೀಸಾ ಸೌಲಭ್ಯಗಳನ್ನು ಸುಧಾರಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.