ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ್ ರಾಷ್ಟ್ರ ಸಮಿತಿ (BRS), ಬಿಜೆಪಿಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದೆ ಎಂದು ಭಾರತ್ ರಾಷ್ಟ್ರ ಸಮಿತಿ (BRS), ಬಿಜೆಪಿಯೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದೆ ಎಂದು ತೆಲಂಗಾಣ (Telangana) ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (KCR) ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯ ಹೆಚ್ಚುತ್ತಿರುವ ಶಕ್ತಿಯನ್ನು ಕೆಸಿಆರ್ ಬಹಳ ಹಿಂದೆಯೇ ಅರಿತುಕೊಂಡಿದ್ದರು. ಬಹಳ ದಿನಗಳಿಂದ ಬಿಜೆಪಿಯೊಂದೆ ಗೆಳೆತನ ಮಾಡಲು ಪ್ರಯತ್ನ ನಡೆಸುತ್ತಿದ್ದರು. ಒಮ್ಮೆ ದೆಹಲಿಗೆ ಬಂದಾಗ ಕೆಸಿಆರ್ ನನ್ನನ್ನು ಭೇಟಿಯಾಗಿ ಇದೇ ಮನವಿ ಮಾಡಿದ್ದರು. ಆದರೆ ತೆಲಂಗಾಣ ಜನತೆಯ ಆಶಯಕ್ಕೆ ವಿರುದ್ಧವಾಗಿ ಬಿಜೆಪಿ ಎಂದಿಗೂ ಕೆಲಸ ಮಾಡಲಾರದು ಎಂದ ಪ್ರಧಾನಿ ಹೇಳಿದರು.
ಬಿಜೆಪಿ ಕೆಸಿಆರ್ ಅನ್ನು ತಿರಸ್ಕರಿಸಿದಾಗಿನಿಂದ, ಬಿಆರ್‌ಎಸ್ ಗೊಂದಲಕ್ಕೊಳಗಾಗಿದೆ. ನನ್ನನ್ನು ನಿಂದಿಸುವ ಯಾವುದೇ ಅವಕಾಶವನ್ನು ಪಕ್ಷ ಕಳೆದುಕೊಳ್ಳುವುದಿಲ್ಲ. ಮೋದಿ ಬಿಜೆಪಿಯ ಹತ್ತಿರಬಿಡುವುದಿಲ್ಲ ಎಂಬುದು ಬಿಆರ್‌ಎಸ್‌ಗೆ ತಿಳಿದಿದೆ. ಇದು ಮೋದಿಯವರ ಗ್ಯಾರಂಟಿ ಎಂದಿದ್ದಾರೆ.
ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ನಂತರ, ಕೆಸಿಆರ್ ನನ್ನನ್ನು ಭೇಟಿ ಮಾಡಲು ದೆಹಲಿಗೆ ಬಂದರು ಮತ್ತು ಎನ್ ಡಿಎ ಸೇರಲು ಬಯಸುವುದಾಗಿ ಹೇಳಿದರು. ಅವರಿಗೆ ಬೆಂಬಲ ನೀಡುವಂತೆಯೂ ಕೇಳಿಕೊಂಡರು. ಅವರ ಕಾರ್ಯಗಳಿಂದಾಗಿ ಮೋದಿ ಅವರೊಂದಿಗೆ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ನಾನು ಅವರಿಗೆ (ಕೆಸಿಆರ್) ಹೇಳಿದ್ದೇನೆ ಎಂದು ಮೋದಿ ಹೇಳಿದರು.
ತೆಲಂಗಾಣವನ್ನು ನಾಶ ಮಾಡುವಲ್ಲಿ ಕಾಂಗ್ರೆಸ್ ಮತ್ತು ಕೆಸಿಆರ್ ಇಬ್ಬರೂ ಸಮಾನ ಪಾಪಿಗಳು. ಹಾಗಾಗಿ, ತೆಲಂಗಾಣ ಜನರು ಒಬ್ಬರನ್ನು ಹೊರಹಾಕಿದ ನಂತರ ಮತ್ತೊಂದು ರೋಗವನ್ನು ಬಿಡಲು ಸಾಧ್ಯವಿಲ್ಲ. ನಾನು ಇದನ್ನು ರಾಜ್ಯದ ಎಲ್ಲೆಡೆ ನೋಡಿದ್ದೇನೆ. ತೆಲಂಗಾಣದ ನಂಬಿಕೆ ಬಿಜೆಪಿ ಮೇಲಿದೆ. ತೆಲಂಗಾಣದ ಮುಂದಿನ ಸಿಎಂ ಬಿಜೆಪಿಯಿಂದಲೇ ಎಂದು ನಿರ್ಧರಿಸಿದ್ದೀರಿ. ತೆಲಂಗಾಣದಲ್ಲಿ ಮೊದಲ ಬಿಜೆಪಿ ಸಿಎಂ ಒಬಿಸಿ ಸಮುದಾಯದಿಂದ (ಹಿಂದುಳಿದ ವರ್ಗ) ಎಂದು ಬಿಜೆಪಿ ನಿಮಗೆ ಭರವಸೆ ನೀಡಿದೆ ಎಂದು ಅವರು ಹೇಳಿದರು.
ತೆಲಂಗಾಣದಲ್ಲಿ ನವೆಂಬರ್ 30 ರಂದು ಒಂದೇ ಹಂತದ ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.