ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೆ ಸಿದ್ಧತೆ ಶುರುವಾಗಿದ್ದು, ಆದ್ರೆ ಪಾಕಿಸ್ತಾನ ಪ್ರವಾಸಕ್ಕೆ ಭಾರತ ನಿರಾಕರಿಸಿರುವ ಕಾರಣ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸುವ ಸಾಧ್ಯತೆ ಹೆಚ್ಚಿದೆ.
ಈ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಪಾಕಿಸ್ತಾನ ಪರಿಹಾರದ ಎಚ್ಚರಿಕೆ ನೀಡಿದೆ. ಇತ್ತ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲು ಐಸಿಸಿ ಯೋಜನೆ ರೂಪಿಸುತ್ತಿದೆ.
2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದರೆ ಪಾಕಿಸ್ತಾನ ಪ್ರವಾಸಕ್ಕೆ ಭಾರತ ನಿರಾಕರಿಸಿತ್ತು. ಭದ್ರತೆ ಹಾಗೂ ರಾಜಕೀಯ ಕಾರಣಕ್ಕಾಗಿ ಪಾಕಿಸ್ತಾನ ಪ್ರವಾಸ ಮಾಡಲು ಭಾರತ ನಿರಾಕರಿಸಿತ್ತು. ವಿಶ್ವಕಪ್ ಟೂರ್ನಿ ಬೆದರಿಕೆ ಹಾಕಿದ ಪಾಕಿಸ್ತಾನ ಕೊನೆಗೆ ಹೈಬ್ರಿಡ್ ಮಾಡೆಲ್ಗೆ ಒಪ್ಪಿಕೊಂಡಿತು. ಭಾರತ ಪಂದ್ಯಗಳು ಹಾಗೂ ಸೆಮಿಫೈನಲ್, ಫೈನಲ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಹಾಗೂ ಲೀಗ್ ಹಂತದ ಪಾಕ್ ಹಾಗೂ ಇತರ ತಂಡಗಳ ಪಂದ್ಯಗಳನ್ನು ಮಾತ್ರ ಪಾಕಿಸ್ತಾನ ಆಯೋಜಿಸಿತ್ತು.
ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ದುಬೈಗೆ ಸ್ಥಳಾಂತರ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದೇ ವೇಳೆ ಹೈಬ್ರಿಡ್ ಮಾಡೆಲ್ ಕುರಿತು ಚರ್ಚೆಗಳು ನಡೆದಿದೆ. ಆದರೆ ಹೈಬ್ರಿಡ್ ಮಾಡೆಲ್ ಆಯೋಜನೆ ಹಾಗೂ ಪ್ರಾಯೋಜಕತ್ವ ಸಮಸ್ಯೆ ಎದುರಾಗುವ ಕಾರಣ ದುಬೈನಲ್ಲಿ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.