ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ೨೦೨೪ ಟೂರ್ನಿಗಾಗಿ ಭರದ ಸಿದ್ಧತೆ ನಡೆಯುತ್ತಿದ್ದು, ಗುಜರಾತ್ ಟೈಟನ್ಸ್ ನಾಯಕನಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ವಾಪಸ್ಸಾಗಿದ್ದಾರೆ .
ತವರಿಗೆ ಹಾರ್ದಿಕ್ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಖಚಿತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್, ಅನೇಕ ಅದ್ಭುತ ನೆನಪುಗಳನ್ನು ಮರಳಿ ತಂದಿದೆ.
ಮುಂಬೈ, ವಾಂಖೆಡೆ, ಪಲ್ಟನ್ಗೆ ಮರಳಿ ಬಂದಿರುವುದು ನನಗೆ ಒಳ್ಳೆಯದೆನಿಸುತ್ತಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಐಪಿಎಲ್ ಹರಾಜಿನಲ್ಲಿ 10 ಲಕ್ಷ ರೂಪಾಯಿಗೆ ಬಿಕರಿಯಾದ ಹಳೆಯ ವಿಡಿಯೋವನ್ನು ಹಾರ್ದಿಕ್ ಹಂಚಿಕೊಂಡಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಹಾರ್ದಿಕ್, ವೈಟ್ ಬಾಲ್ ಕ್ರಿಕೆಟ್ನಲ್ಲೇ ಉತ್ತಮ ಆಲ್ರೌಂಡರ್ ಎನಿಸಿಕೊಂಡಿದ್ದಾರೆ. ಇದರ ನಡುವೆ 15 ಕೋಟಿ ರೂ. ದೊಡ್ಡ ಮೊತ್ತಕ್ಕೆ ಮುಂಬೈ ತಂಡದಿಂದ ಹಾರ್ದಿಕ್ ಗುಜರಾತ್ ತಂಡವನ್ನು ಸೇರಿಕೊಂಡಿದ್ದರು.
ಹಾರ್ದಿಕ್ ಪಾಂಡ್ಯರನ್ನು ತಮ್ಮ ತಂಡಕ್ಕೆ ಮರಳಿ ಪಡೆಯಲು ಸಾಕಾಗುವಷ್ಟು ಹಣವಿಲ್ಲದಿದ್ದರಿಂದ ಮುಂಬೈ ಇಂಡಿಯನ್ಸ್ ತಂಡ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ರನ್ನು ರಾಯಲ್ ಚಾಲೆಂಜರ್ಸ್ ತಂಡಕ್ಕೆ ವರ್ಗಾವಣೆ ಮಾಡಿ, ಹಾರ್ದಿಕ್ ಪಾಂಡ್ಯರನ್ನು ತಮ್ಮ ತಂಡಕ್ಕೆ ಮರಳಿ ಪಡೆದಿದೆ.
ಹಾರ್ದಿಕ್ ಮರಳಿ ತಂಡ ಸೇರಿದ್ದಕ್ಕೆ ಖುಷಿ ವ್ಯಕ್ತಪಡಿಸಿರುವ ನೀತಾ ಅಂಬಾನಿ, ಇದು ಹೃದಯಸ್ಪರ್ಶಿ ಪುನರ್ಮಿಲನ ಎಂದು ವರ್ಣಿಸಿದ್ದಾರೆ. ಮನೆಗೆ ಮರಳಿದ ಹಾರ್ದಿಕ್ರನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ! ಇದು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಹೃದಯಸ್ಪರ್ಶಿ ಪುನರ್ಮಿಲನವಾಗಿದೆ! ಮುಂಬೈ ಇಂಡಿಯನ್ಸ್ನ ಯುವ ಪ್ರತಿಭೆಯಿಂದ ಈಗ ಟೀಮ್ ಇಂಡಿಯಾ ಸ್ಟಾರ್ ಆಗಿರುವ ಹಾರ್ದಿಕ್ ಬಹಳ ದೂರ ಸಾಗಿದ್ದಾರೆ ಮತ್ತು ಮುಂಬೈ ಇಂಡಿಯನ್ಸ್ ಜತೆಗಿನ ಭವಿಷ್ಯದ ಒಡೆನಾಟದ ಮೇಲೆ ತುಂಬಾ ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.
This brings back so many wonderful memories. Mumbai. Wankhede. Paltan. Feels good to be back. 💙 #OneFamily @mipaltan pic.twitter.com/o4zTC5EPAC
— hardik pandya (@hardikpandya7) November 27, 2023
ಆಕಾಶ್ ಅಂಬಾನಿ ಮಾತನಾಡಿ ಹಾರ್ದಿಕ್ ಅವರನ್ನು ಮುಂಬೈ ಇಂಡಿಯನ್ಸ್ಗೆ ಹಿಂತಿರುಗಿ ನೋಡುವುದು ತುಂಬಾ ಸಂತೋಷವಾಗಿದೆ. ತವರಿಗೆ ಮರಳಿರುವುದು ಸಂತೋಷವಾಗಿದೆ. ಅವರು ಆಡುವ ಯಾವುದೇ ತಂಡಕ್ಕೆ ಅವರು ಉತ್ತಮ ಸಮತೋಲನವನ್ನು ಒದಗಿಸುತ್ತಾರೆ. ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಹಾರ್ದಿಕ್ ಅವರ ಮೊದಲ ಕ್ರಿಕೆಟ್ ಹಾದಿ ಭಾರೀ ಯಶಸ್ವಿಯಾಗಿದೆ ಮತ್ತು ಅವರು ತಮ್ಮ ಎರಡನೇ ಇನಿಂಗ್ಸ್ನಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.