ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಅನಿಮಲ್ ಸಿನಿಮಾ ಪ್ರಮೋಷನ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಮೋಷನ್‌ಗಾಗಿ ಬೆಂಗಳೂರಿಗೆ ರಶ್ಮಿಕಾ ಆಗಮಿಸಿದ್ದು, ಕಿಸ್ಸಿಂಗ್ ಸೀನ್‌ಗಳ ಬಗ್ಗೆ ರಶ್ಮಿಕಾಗೆ ಪ್ರಶ್ನೆ ಎದುರಾಗಿದೆ.
ಇದಕ್ಕೆ ರಶ್ಮಿಕಾ ಜಾಣ್ಮೆಯಿಂದ ಹೀಗೆ ಉತ್ತರಿಸಿದ್ದಾರೆ..
ಕಿಸ್ಸಿಂಗ್ ಸೀನ್ ಬೇಕಾ ಬೇಡ್ವಾ? ಎಷ್ಟು ಸೀನ್ ಇರಬೇಕು ಅನ್ನೋದನ್ನು ನಟರು ನಿರ್ಧಾರ ಮಾಡೋದಿಲ್ಲ. ಇದು ನಿರ್ದೇಶಕರಿಗೆ ಬಿಟ್ಟಿದ್ದು. ಅವರು ತಮ್ಮ ಕಥೆಯನ್ನು ಹೇಳಲು ಬಯಸುವ ರೀತಿ ಅದು. ಅವರು ಹೇಳಿದ್ದನ್ನು ಮಾಡುವ ಕೆಲಸ ನಮ್ಮದು. ನಿರ್ದೇಶಕರು ನಮ್ಮ ಮೇಲೆ ನಂಬಿಕೆ ಇಟ್ಟು ರೋಲ್ ನೀಡಿರುತ್ತಾರೆ. ಪಾತ್ರಕ್ಕೆ ಜೀವ ತುಂಬೋದಷ್ಟೇ ನಮ್ಮ ಕೆಲಸ ಎಂದಿದ್ದಾರೆ.
ಈ ಹಿಂದೆ ಎಷ್ಟೋ ಬಾರಿ ಕಿಸ್ಸಿಂಗ್ ಸೀನ್ಸ್ ಬಗ್ಗೆ ಪ್ರಶ್ನೆ ಕೇಳಿದಾಗ ಮುಜುಗರದಿಂದ ಉತ್ತರಿಸಿ ಸದಾ ಟ್ರೋಲ್‌ಗಳಿಗೆ ಆಹಾರವಾಗ್ತಿದ್ದ ರಶ್ಮಿಕಾ ಇದೀಗ ಸ್ಮಾರ್ಟ್ ಆಗಿ ಉತ್ತರ ನೀಡ್ತಿದ್ದಾರೆ ಅನ್ನೋದು ಫ್ಯಾನ್ಸ್ ಅಭಿಪ್ರಾಯವಾಗಿದೆ.