ಮಿಂಚುಹುಳುಗಳ ಸಂಖ್ಯೆಯಲ್ಲಿ ತೀವ್ರ ಕುಸಿತ, ಹೆಚ್ಚುತ್ತಿರುವ ಕೃತಕ ಬೆಳಕು ಇದಕ್ಕೆ ಕಾರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೆನಪಿದ್ಯಾ? ನೀವು ಚಿಕ್ಕವರಿದ್ದಾಗ ಮಿಂಚುಹುಳುಗಳನ್ನು ಬೆನ್ನಟ್ಟಿ ಹೋಗಿದ್ದು, ಅವುಗಳನ್ನು ತಂದು ಖಾಲಿ ಬೆಂಕಿಪೊಟ್ಟಣದ ಡಬ್ಬಿಯೊಳಕ್ಕೆ ಹಾಕಿಟ್ಟಿದ್ದು, ಕತ್ತಲಾದ ನಂತರ ಹುಳುಗಳನ್ನು ಹಾರಾಡಲು ಬಿಟ್ಟು ಲೈಟ್ ನೋಡಿ ಸಂಭ್ರಮಿಸಿದ್ದು? ಎಷ್ಟು ಸಮಯವಾಯ್ತು ಈ ಹುಳುಗಳನ್ನು ನೋಡಿ? ನಿಮ್ಮ ಮಕ್ಕಳು ಮಿಂಚುಹುಳುಗಳ ಜೊತೆ ಆಟ ಆಡಿದ್ದಾರಾ?

How and why do fireflies light up? | Scientific Americanಇತ್ತೀಚೆಗೆ ಮಿಂಚುಹುಳಗಳ ಸಂಖ್ಯೆ ತೀವ್ರವಾಗಿ ಕುಸಿತವಾಗಿದೆ. ಹೆಚ್ಚಾಗಿ ಪಶ್ಚಿಮ ಘಟ್ಟಗಳಲ್ಲಿ ಕಾಣಿಸುವ ಮಿಂಚುಹುಳುಗಳು ಇದೀಗ ಅಲ್ಲಿಯೂ ಕಾಣದಂತಾಗಿವೆ, ಅವುಗಳ ಸಂತತಿ ಕಡಿಮೆಯಾಗಿದೆ. ಎನ್ವಿರಾನ್ಮೆಂಟಲ್ ಮ್ಯಾನೇಜ್‌ಮೆಂಟ್ ಮತ್ತು ಪಾಲಿಸಿ ರಿಸರ್ಚ್ ಇನ್ಸಿಟ್ಯೂಟ್ ಮತ್ತು ಗಾಂಧಿ ವಿಜ್ಞಾನ ಕೇಂದ್ರದ ಸಂಶೋಧಕರು ಜೀರುಂಡೆ ಜಾತಿಗಳು ಮತ್ತು ಅವುಗಳ ಪರಿಸರ ಪ್ರಾಮುಖ್ಯತೆಯ ಅಧ್ಯಯನ ಕೈಗೊಂಡಿದ್ದಾರೆ.

11 Cool Things You Never Knew about Fireflies - Scientific American Blog  Networkಮಿಂಚುಹುಳುಗಳ ಅವನತಿಗೆ ಪ್ರಮುಖ ಕಾರಣ ಕೃತಕ ಬೆಳಕು, ಹೌದು, ಇತ್ತೀಚೆಗೆ ಎಲ್ಲಿ ನೋಡಿದರೂ ಹೆಚ್ಚು ಕೃತಕ ಬೆಳಕಿನ ಬಳಕೆಯಾಗುತ್ತಿದೆ. ಇದರಿಂದಲೂ ಮಿಂಚುಹುಳುಗಳ ಅವನತಿಯಾಗುತ್ತಿರಬಹುದು. ಇನ್ನು ಹಳ್ಳಿಗಳಲ್ಲಿ ವಿದ್ಯುದ್ದೀಕರಣ, ಅರಣ್ಯಗಳಲ್ಲಿ ಕೃತಕ ಬೆಳಕಿನ ಬಳಕೆಯೂ ಪರಿಣಾಮ ಬೀರಿದೆ.

Chasing fireflies: Study uncovers hidden gems in Bengaluru's night skiesಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸಿ ಬಣ್ಣಬಣ್ಣದ ಬೆಳಕುಗಳನ್ನು ಅಳವಡಿಸಲಾಗಿದೆ, ಪ್ರವಾಸೋದ್ಯಮದಿಂದಲೂ ಸಮಸ್ಯೆ ಎದುರಾಗುತ್ತಿದೆ. ಕೃತಕ ಬೆಳಕಿನಿಂದಾಗಿ ಮಿಂಚುಹುಳುಗಳ ಪರಸ್ಪರ ಸಂವಹನ ನಡೆಸಲು ಹಾಗೂ ಸಂಯೋಗಕ್ಕೆ ಸಾಧ್ಯವಾಗುತ್ತಿಲ್ಲ. ಸಂತತಿ ಬೆಳೆಯದೇ ಸಮಸ್ಯೆಯಾಗುತ್ತಿದೆ.

Drastic decline in number of fireflies; is artificial lighting a big threat  to the light-emitting be- The New Indian Expressಹೆಚ್ಚಾಗಿ ಚಾರ್ಮಾಡಿ ಘಾಟ್, ಬ್ರಹ್ಮಗಿರಿ, ಲಕ್ಕವಳ್ಳಿ, ಚಿಕ್ಕಮಗಳೂರು ಹಾಗೂ ಕಳಸ ರಸ್ತೆಗಳಲ್ಲಿ ಬೆಳಕಿನ ಹುಳಗಳನ್ನು ಕಾಣಬಹುದಾಗಿದೆ, ಆದರೆ ಈಗ ಎಲ್ಲೆಡೆ ಅವುಗಳ ಸಂಖ್ಯೆ ಕಡಿಮೆಯಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!