ಮುಂದಿನ 4 ವರ್ಷಗಳಲ್ಲಿ 15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್: ಮೋದಿ ಸರಕಾರ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಇಂದು ಮುಂದಿನ 4 ವರ್ಷಗಳಲ್ಲಿ 15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ (Women Self Help Group) ಡ್ರೋನ್ (Drone) ನೀಡುವ ಯೋಜನೆಗೆ ಅನುಮೋದಿಸಲಾಗಿದೆ.

2023-2024 ಮತ್ತು 2025-2026ರ ಅವಧಿಯಲ್ಲಿ ಡ್ರೋನ್ ವಿತರಿಸಲಿದ್ದು ಕೃಷಿ ಚಟುವಟಿಕೆಗಳಿಗೆ ಬಾಡಿಗೆ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಮತ್ತೊಂದು ಅವಕಾಶ ಕಲ್ಪಿಸಲಾಗುತ್ತಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಸರ್ಕಾರವೂ ಡ್ರೋನ್ ಖರೀದಿಗೆ 80% ಹಣ ಅಥಾವ 8 ಲಕ್ಷದ ಗರಿಷ್ಠ ನೆರವು ನೀಡಲಿದೆ. ಮುಂದಿನ 4 ವರ್ಷದ ಯೋಜನೆಗೆ ಸರ್ಕಾರವು 1,261 ಕೋಟಿ ರೂ. ಹಣ ಮೀಸಲಿಡಲಿದೆ ಎಂದು ತಿಳಿಸಿದರು.

ಕೃಷಿ ಚಟುವಟಿಗಳಲ್ಲಿ ಡ್ರೋನ್ ಬಳಕೆ ಹೆಚ್ಚುತ್ತಿದೆ. ರಸಗೊಬ್ಬರಗಳ ಸಿಂಪಡಣೆ ಡ್ರೋನ್ ಮೂಲಕ ಮಾಡಲಾಗುತ್ತಿದೆ. ದೇಶದಲ್ಲಿ ಹತ್ತು ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇವರಿಗೆ ಲಕ್‌ಪತಿ ದೀದಿ ಯೋಜನೆಯಡಿ ಡ್ರೋನ್ ನೀಡುವ ಮೂಲಕ ಕೃಷಿ ವಲಯದಲ್ಲಿ ಕ್ರಾಂತಿ ಮಾಡುವ ಉದ್ದೇಶ ಹೊಂದಲಾಗಿದೆ. ಡ್ರೋನ್ ಚಾಲನೆಗೆ 5 ದಿನ ತರಬೇತಿ ನೀಡಲಾಗುವುದು. ರಸಗೊಬ್ಬರ ಸಿಂಪಪಡೆಗೆ 10 ದಿನಗಳ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!