ಹೊಸದಿಗಂತ ವರದಿ, ಮೈಸೂರು:
ಮೊಬೈಲ್ ವಿಚಾರದಲ್ಲಿ ತಂದೆ ಮಗನ ನಡುವೆ ನಡೆದ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ. ಉಮೇಜ್(23) ತನ್ನ ತಂದೆಯ ಕೈಯಿಂದಲೇ ಕೊಲೆಯಾದ ದುರ್ದೆವಿ.
ಮಗನ ಕೊಂದ ತಂದೆ ಅಸ್ಲಂಪಾಷನನ್ನು ಎನ್.ಆರ್.ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತಾಯಿಯ ಮೊಬೈಲ್‌ನ್ನು ಅವರ ಅನುಮತಿ ಪಡೆಯದೇ ಉವೇಜ್ ಬಳಸಿದ್ದಾನೆ.ಈ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಕುಪಿತನಾಗಿದ್ದ ಅಸ್ಲಂಪಾಷ ಚಾಕುವಿನಿಂದ ಮಗ ಉವೇಜ್‌ಗೆ ಇರಿದು ಕೊಂದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಎನ್.ಆರ್.ಠಾಣೆಯ ಪೊಲೀಸರು ಅಸ್ಲಂಪಾಷಾನನ್ನ ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.