ಫೇಸ್ ಬುಕ್ ಗೆಳೆಯನನ್ನು ಮದ್ವೆಯಾಗಲು ಪಾಕ್ ಗೆ ತೆರಳಿದ್ದ ಅಂಜು ಭಾರತಕ್ಕೆ ವಾಪಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು (Nasrullah) ಮದುವೆಯಾಗಲು ಪಾಕಿಸ್ತಾನಕ್ಕೆ (Pakistan) ಹೋಗಿದ್ದ ಮಹಿಳೆ ಅಂಜು (Anju) ಮರಳಿ ಭಾರತಕ್ಕೆ ಆಗಮಿಸಿದ್ದಾಳೆ.

ಇತ್ತೀಚೆಗೆ ವಾಘಾ ಗಡಿ ಮೂಲಕ ಭಾರತಕ್ಕೆ (India) ಮರಳಿದ ಫಾತಿಮಾ (Fatima) ಎಂದು ಹೆಸರನ್ನು ಬದಲಿಸಿಕೊಂಡಿರುವ ಅಂಜು (34) ಭಾರತಕ್ಕೆ ಮರಳಿದ್ದಾಳೆ.

ಜುಲೈನಲ್ಲಿ ಪಾಕಿಸ್ತಾನಕ್ಕೆ ತೆರಳಿ ಖೈಬರ್ ಪಖ್ತುಂಕ್ವಾದಲ್ಲಿ ವಾಸವಾಗಿದ್ದಳು. ಆಕೆ ಪಾಕಿಸ್ತಾನದಲ್ಲಿ ತನ್ನ ಫೇಸ್‌ಬುಕ್ ಗೆಳೆಯ ನಸ್ರುಲ್ಲಾನನ್ನು ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರವಾಗಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನಕ್ಕೆ ತೆರಳಿದ್ದಾಗ ತನ್ನ ಗೆಳೆಯನನ್ನು ಭೇಟಿಯಾಗಲು ಹಾಗೂ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಹೋಗುವುದಾಗಿ ತಿಳಿಸಿದ್ದಳು. ಈ ವೇಳೆ ನಸ್ರುಲ್ಲಾನನ್ನು ಮದುವೆಯಾಗುವ ಯಾವುದೇ ಯೋಜನೆ ಇಲ್ಲ, ತನ್ನ ವೀಸಾ ಅವಧಿ ಮುಗಿದ ಬಳಿಕ ಆಗಸ್ಟ್ 20ಕ್ಕೆ ಭಾರತಕ್ಕೆ ಮರಳುವುದಾಗಿ ಹೇಳಿದ್ದಳು.

ಈ ಹೇಳಿಕೆ ನೀಡಿದ ಒಂದು ದಿನದ ಬಳಿಕ ಅಂಜು ನಸ್ರುಲ್ಲಾನನ್ನು ವಿವಾಹವಾದಳು ಹಾಗೂ ತನ್ನ ಹೆಸರನ್ನು ಫಾತಿಮಾ ಎಂದು ಬದಲಿಸಿಕೊಂಡಳು. ಆಗಸ್ಟ್‌ನಲ್ಲಿ ಪಾಕಿಸ್ತಾನ ಆಕೆಯ ವೀಸಾವನ್ನು 1 ವರ್ಷಕ್ಕೆ ವಿಸ್ತರಿಸಿತು. ನಂತರ ಸೆಪ್ಟೆಂಬರ್‌ನಲ್ಲಿ ನಸ್ರುಲ್ಲಾ ತನ್ನ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ, ತನ್ನ ಮಕ್ಕಳನ್ನು ನೋಡಲು ಬಯಸಿದ್ದಾಳೆ ಎಂದು ಹೇಳಿಕೊಂಡಿದ್ದರು. ಇದೀಗ ಅಂಜು ಭಾರತಕ್ಕೆ ಮರಳಿದ್ದಾಳೆ.

ಅಂಜು ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಅರವಿಂದ್ ಅವರನ್ನು ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!