Monday, December 29, 2025

ಬಾಂಗ್ಲಾ ನುಸುಳುಕೋರರನ್ನು ಮತ ಬ್ಯಾಂಕ್​ ಎಂದು ಪರಿಗಣಿಸಿದ ಕಾಂಗ್ರೆಸ್: ಅಮಿತ್​​ ಶಾ ವಾಗ್ದಾಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶಿ ನುಸುಳುಕೋರರನ್ನು ಕಾಂಗ್ರೆಸ್​ ಮತ ಬ್ಯಾಂಕ್​ ಎಂದು ಪರಿಗಣಿಸಿದೆ ಎಂದು ವಿಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್​​ ಶಾ ವಾಗ್ದಾಳಿ ನಡೆಸಿದರು.

ಅಸ್ಸಾಂ ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಅಸ್ಸಾಂನಿಂದ ಮಾತ್ರವಲ್ಲದೆ ಭಾರತದ ಉಳಿದ ಭಾಗಗಳಿಂದಲೂ ನೆರೆಯ ದೇಶಗಳ ಎಲ್ಲಾ ಅಕ್ರಮ ವಲಸಿಗರನ್ನು ಕೇಂದ್ರವು ಗುರುತಿಸುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಕೇವಲ ಅಸ್ಸಾಂ ಜನರ ಸಾಂಸ್ಕೃತಿಕ ಗುರುತಿನ ರಕ್ಷಣೆ ಭರವಸೆ ಮಾತ್ರ ನೀಡುವುದಿಲ್ಲ. ಬದಲಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕಡೆ ಗಮನಹರಿಸಿದ್ದಾರೆ.ಮತ್ತೆ ಐದು ವರ್ಷ ಬಿಜೆಪಿಗೆ ಅಧಿಕಾರ ಸಿಕ್ಕಲ್ಲಿ ಅಸ್ಸಾಂ ಅನ್ನು ನುಸುಳುಕೋರ ಮುಕ್ತವಾಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ಅಸ್ಸಾಂನಲ್ಲಿ ಬಾಂಗ್ಲಾದೇಶ ನುಸುಳುಕೋರರನ್ನು ಮಾತ್ರವಲ್ಲದೇ ಭಾರತದೆಲ್ಲೆಡೆ ನುಸುಳುಕೋರರನ್ನು ಪತ್ತೆ ಮಾಡುತ್ತೇವೆ ಎಂದರು.

ಶಂಕರದೇವ ಅವರು ಒಂದು ಭಾರತ ಎಂದು ಕರೆದರು. ಅದನ್ನೇ ಪ್ರಧಾನಿ ಮುಂದುವರೆಸಿದ್ದಾರೆ. ಕಳೆದ 11 ವರ್ಷದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ವಿವಿಧ ಉಗ್ರಗಾಮಿ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಒಪ್ಪಂದಗಳ ಶೇಕಡ 92 ರಷ್ಟು ಷರತ್ತುಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದರು.

error: Content is protected !!