ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಟೌನ್ ಖ್ಯಾತ ನಟ ರಣ್ದೀಪ್ ಹುಡಾ ನಿನ್ನೆಯಷ್ಟೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ವಧು ಲಿನ್ ಲೈಶ್ರಮ್ ಮಣಿಪುರದವರಾಗಿದ್ದು, ಮೈಥೇಯಿ ಸಂಪ್ರದಾಯದಂತೆ ಇಂಫಾಲ್ನ ಚುಮ್ತಾಂಗ್ ಶಾನ್ಪುಂಗ್ ರೆಸಾರ್ಟ್ನಲ್ಲಿ ಮದುವೆಯಾಗಿದ್ದಾರೆ.
ವಧುವಿನ ಸಂಪ್ರದಾಯದಂತೆ ಮದುವೆಯಾಗಿದ್ದು ಖುಷಿಯಿದೆ. ಅವರ ಸಂಪ್ರದಾಯದ ಬಗ್ಗೆ ನನಗೆ ಗೌರವ ಇದೆ, ಮುಂಬೈನಲ್ಲಿ ರಿಸಪ್ಷನ್ ಮಾಡಿಕೊಳ್ತೇವೆ ಎಂದು ಹೂಡಾ ಹೇಳಿದ್ದಾರೆ.
ಸೆಲೆಬ್ರಿಟಿಗಳು ಹುಡಾ ಮದುವೆಯ ಫೋಟೊಗಳನ್ನು ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.