ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣ ಕೊಡಗಿನ ಬಾಳೆಲೆ ಹೋಬಳಿಯಲ್ಲಿ ಹುಲಿ ದಾಳಿ ಮುಂದುವರಿದಿದ್ದು, ಹಸುವೊಂದು ಹುಲಿ ದಾಳಿಗೆ ಬಲಿಯಾಗಿದೆ. ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ಬೆಸಗೂರು ಗ್ರಾಮದ ನಂಜಮ್ಮ ಎಂಬವರಿಗೆ ಸೇರಿದ ಹಸು ಇದೆಂದು ಹೇಳಲಾಗಿದೆ.
ಎರಡು ದಿನಗಳ ಹಿಂದೆ ಅಲ್ಲಿನ ವಿವೇಕ್ ಬೋಪಣ್ಣ ಎಂಬವರ ಕಾಫಿ ತೋಟದಲ್ಲಿ ಹಸುವಿನ ಮೇಲೆ ದಾಳಿ ಕೊಂದು ಹಾಕಿದ್ದು, ಅಂದಾಜು ನೂರು ಅಡಿ ದೂರ ಎಳೆದುಕೊಂಡು ಹೋಗಿ ಅರ್ಧಭಾಗದಷ್ಟು ತಿಂದು ಹಾಕಿದೆ.
ತೋಟದಲ್ಲಿ ಹುಲಿ ಇರುವ ಬಗ್ಗೆ ಕಾರ್ಮಿಕರು ಮಾಹಿತಿ ನೀಡಿದ್ದು,ಸ್ಥಳಕ್ಕೆ ಪೊನ್ನಂಪೇಟೆ ಆರ್ ಎಫ್ ಓ ಶಂಕರ್ ಹಾಗೂ ಸಿಬ್ಬಂದಿಯವರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.