ಹೊಸದಿಗಂತ ವರದಿ, ಹುಬ್ಬಳ್ಳಿ:
ಬೆಳಗಾವಿಯಲ್ಲಿ ಡಿ. ೪ ರಿಂದ ಆರಂಭವಾಗುವ ಅಧಿವೇಶನದಲ್ಲಿ ಸುಮಾರು ೧೦ ಪ್ರಮುಖ ಬಿಲ್ ಮಂಡನೆಯಾಗಲಿವೆ ಎಂದು ಕಾನೂನ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂದು ಪಕ್ಷದ ಬಿಸಿನೆಸ್ ಅಡ್ವೈಜರ್ ಸಮಿತಿ ಸಭೆ ಸಹ ನಡೆಯಲಿದೆ. ಆ ಸಭೆಯಲ್ಲಿ ಎಲ್ಲರೂ ಸುರ್ಘ ಚರ್ಚೆ ನಡೆಸಿ, ಯಾವ ಬಿಲ್ ಮಂಡಸಿಬೇಕು ಎಂಬುದವರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ಅಅಧಿವೇಶನದಲ್ಲಿ ಬರಗಾರ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಮುಖ ಸಮಸ್ಯೆ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಐದು ರಾಜ್ಯದ ಚುನಾವಣೆ ಮತದಾನೋತ್ತರ ಫಲಿತಾಂಶ ಬಂದಿದೆ. ಬಹುತೇಕ ಸಮೀಕ್ಷೆ ನೋಡಿದರೆ ಐದರಲ್ಲಿ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಅಕಾರಕ್ಕೆ ಹಿಡಿಯಲಿದೆ ಎಂಬ ಫಲಿತಾಂಶ ಬಂದಿವೆ.
ತೆಲಂಗಾಣ, ಛತ್ತೀಸ್ಗಢ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಅಧಿಕಾರಕ್ಕೆ ಬರುವ ಭರವಸೆದೆ ಎಂದು ತಿಳಿಸಿದರು.