ಗುಮ್ಮಟನಗರಿಯಲ್ಲಿ ಶ್ವಾನಗಳಿಗೆ ವಿಷಪ್ರಾಷಣ: 15 ಕ್ಕೂ ಅಧಿಕ ಶ್ವಾನಗಳ ಸಾವು

ಹೊಸ ದಿಗಂತ ವರದಿ, ವಿಜಯಪುರ:

ಗುಮ್ಮಟ ನಗರಿಯಲ್ಲಿ ಕಿಡಿಗೇಡಿಗಳು ಶ್ವಾನಗಳಿಗೆ ವಿಷ ಉಣಿಸಿದ ಪರಿಣಾಮ, 15 ಕ್ಕೂ ಹೆಚ್ಚು ಶ್ವಾನಗಳು ಸಾವಿಗೀಡಾದ ಘಟನೆ ನಡೆದಿದೆ.

ಇತ್ತೀಚೆಗೆ ‌ನಗರದ ಜುಮ್ಮಾ ಮಸೀದಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯಲ್ಲಿ ಬೀದಿ ಶ್ವಾನಗಳ ಹಾವಳಿ ಹೆಚ್ಚಾಗಿತ್ತು. ಬಡಾವಣೆಯ ಹಲವು ಸಣ್ಣ ಬಾಲಕರ ಮೇಲೆ ಶ್ವಾನಗಳು ದಾಳಿ ಮಾಡಿದ್ದವು. ಬಳಿಕ ಪಾಲಿಕೆ ಸಿಬ್ಬಂದಿಗಳ ತಂಡ ಶ್ವಾನಗಳನ್ನು ಹಿಡಿದುಕೊಂಡು ಹೋಗಿದ್ದರು. ಆದರೆ ಶುಕ್ರವಾರ ತಡರಾತ್ರಿ ಕೆಲ ಕಿಡಿಗೇಡಿಗಳು ಶ್ವಾನಗಳಿಗೆ ವಿಷ ಉಣಿಸಿದ್ದಾರೆ. ಇದರಿಂದ 15ಕ್ಕೂ ಅಧಿಕ ಶ್ವಾನಗಳನ್ನು ಮೃತಪಟ್ಟಿವೆ.

ಇಲ್ಲಿನ ಬಡಿಕಮಾನ್, ಬಾಗಾಯತ್ ಬಡಾವಣೆ, ನಾಗರಬಾವಡಿ, ಶೆಡಜಿ ಮುಲ್ಲಾ ಬಡಾವಣೆ, ಜುಮ್ಮಾ ಮಸೀದಿ ಸೇರಿದಂತೆ ಹಲವು ಬಡಾವಣೆಯಲ್ಲಿ ಬೀದಿ ಶ್ವಾನಗಳ ಹಾವಳಿ ಹೆಚ್ಚಾಗಿತ್ತು. ನ. 27 ರಂದು ಮೂವರು ಬಾಲಕರಿಗೆ ಶ್ವಾನಗಳು ಕೂಡ ಕಚ್ಚಿದ್ದವು, ಇನ್ನೂ ಶ್ವಾನಗಳಿಗೆ ಹೆದರಿ ಭಯದಲ್ಲೇ ಈ ಬಡಾವಣೆಯ ಮಕ್ಕಳು ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿಚಾರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬರುತ್ತಲೇ ಕೆಲ ಶ್ವಾನಗಳನ್ನು ಪಾಲಿಕೆಯವರು ಹಿಡಿದು ಬೇರೆಡೆ ಸ್ಥಳಾಂತರ ಮಾಡಿದ್ದಾರೆ.

ಈ ಮಧ್ಯೆ ಕೆಲ ಕಿಡಿಗೇಡಿಗಳು ಮಟನ್ ನಲ್ಲಿ ವಿಷ ಬೆರೆಸಿ ಶ್ವಾನಗಳಿಗೆ ಹಾಕಿದ್ದಾರೆ. ಇದನ್ನು ತಿಂದ 15 ಕ್ಕೂ ಅಧಿಕ ಶ್ವಾನಗಳು ಸಾವನಪ್ಪಿವೆ‌. ಇನ್ನೂ ವಿಷವನ್ನು ತಿಂದು‌ ನರಳಾಡುವ ಶ್ವಾನಗಳನ್ನು ಬದುಕಿಸಲು ಸ್ಥಳೀಯರು ಪ್ರಯತ್ನ ಪಟ್ಟಿದ್ದಾರೆ. ಜೊತೆಗೆ ಜಿಲ್ಲಾಸ್ಪತ್ರೆಯ ವೈದ್ಯರು ಸಹಿತ ಕೆಲ ಶ್ವಾನಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಅಲ್ಲದೆ ಇತ್ತೀಚೆಗೆ ಕಳ್ಳರ ಹಾವಳಿ ಜುಮ್ಮಾ ಮಸೀದಿ ಏರಿಯಾದಲ್ಲಿ ಹೆಚ್ಚಾಗಿದೆ ಹೀಗಾಗಿ ಕಳ್ಳರೇ ಶ್ವಾನಗಳಿಗೆ ವಿಷ ಉಣಿಸಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!