ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಮತ ಎಣಿಕೆ ನಡೆಯುತ್ತಿದ್ದು,ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇದಕ್ಕೆ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.
ತೆಲಂಗಾಣದಲ್ಲಿಯೂ ರಾಗಾ ಭಾರತ್ ಜೋಡೋ ಯಾತ್ರೆ ನಡೆಸಿದ್ದರು. ಜನರಿಗೆ ರಾಗಾ ಸರಳತೆ ಇಷ್ಟವಾಗಿದೆ. ಈ ರೀತಿ ನಾಯಕ ಬೇಕು ಎಂದು ಜನರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರು ಕನಸು ನನಸಾಗಲಿದೆ ಎಂದು ಭಾರತ ಕಾಂಗ್ರೆಸ್ ವೀಕ್ಷಕ ಮಣಿಕ್ರಾವ್ ಠಾಕ್ರೆ ಹೇಳಿದ್ದಾರೆ.