ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ದೇಶದಲ್ಲಿ ಇಂದು ಬಿಜೆಪಿಯ ಅಲೆ ಏಳಲಿದೆ. ಇಂದು ಬಿಜೆಪಿಯ ಪರ ವಾತಾವರಣ ಎಲ್ಲೆಡೆ ಕಾಣಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಮೋದಿ ಮತ್ತೆ ಪ್ರಧಾನಿಯಾಗಲಿ ಎನ್ನುವುದು ಇಡೀ ದೇಶದ ಆಶಯ. ಸುನಾಮಿ ರೀತಿ ಇಡೀ ದೇಶದಲ್ಲಿ ಬಿಜೆಪಿ ಅಲೆ ಎದ್ದಿದೆ. ಬಹುತೇಕ ನಾವೇ ಗೆಲುವು ಸಾಧಿಸುತ್ತೇವೆ.
ಜನರಿಗೆ ದೇಶದ ರಕ್ಷಣೆ ಗ್ಯಾರೆಂಟಿ ಬೇಕು, ಅಧಿಕಾರ ತಿನ್ನುವ ಗ್ಯಾರೆಂಟಿ ಅಲ್ಲ. ಗ್ಯಾರೆಂಟಿ ಅನ್ನೋ ಒಂದೇ ಆಮಿಷ ತೋರಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನ ತಮ್ಮ ನಿರ್ಧಾರಕ್ಕೆ ಈಗಾಗಲೇ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದಿದ್ದಾರೆ.