ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಚುನಾವಣೆಯಲ್ಲಿ ಬಿಜೆಪಿ ಅಮೋಘ ಗೆಲುವಿನತ್ತ ದಾಪುಗಾಲಿಡುತ್ತಿದ್ದು, ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ .
ಎಲ್ಲೆಡೆ ಈಗ ಒಂದೇ ಮಾತು ವೈರಲ್ ಆಗುತ್ತಿದ್ದು, ಅದುವೇ ಇದು ದೇಶಕ್ಕೆ ‘ಮೋದಿ ಗ್ಯಾರಂಟಿ’ (ModiKiGuarantee) ಎಂದು…
ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಮೋದಿ ಗ್ಯಾರಂಟಿಗಳ ಮುಂದೆ ಕಾಂಗ್ರೆಸ್‌ನ ಹುಸಿ ಭರವಸೆಗಳು ಕೆಲಸ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ನನ್ನ ಮೂರನೇ ಅವಧಿಯಲ್ಲಿ ವಿಶ್ವದ ಅತೀ ದೊಡ್ಡ ಮೂರು ಆರ್ಥಿಕತೆಯಲ್ಲಿ (Economy) ಭಾರತದ (India) ಹೆಸರು ಇರಲಿದೆ. ಇದು ಮೋದಿ ನೀಡುವ ಗ್ಯಾರಂಟಿ ಎಂದು ಭಾಷಣ ಮಾಡಿದ್ದರು.
ಇದೀಗ ಲೋಕಸಭಾ ಚುನಾವಣೆ ನಡೆಯುವ ಮುನ್ನ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಹಿಂದಿ ಬೆಲ್ಟ್ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ #ModiKiGuarantee ಟ್ರೆಂಡ್ ಆಗಿದೆ. ದೇಶಕ್ಕೆ “ನಮೋ” ಗ್ಯಾರಂಟಿ. ಪ್ರಧಾನಿ ನರೇಂದ್ರ ಮೋದಿ ಇದ್ದರೆ ಇದ್ದರೆ ಎಲ್ಲವೂ ಸಾಧ್ಯ ಎಂದು ಕರ್ನಾಟಕ ಬಿಜೆಪಿ ಪೋಸ್ಟ್ ಮಾಡಿದೆ.