ಹೊಸದಿಗಂತ ವರದಿ,ಗೋಕರ್ಣ
ಸಮುದ್ರದ ಸುಳಿಗೆ ಸಿಲುಕಿ ಇಬ್ಬರು ಪ್ರವಾಸಿಗ ಮೃತಪಟ್ಟಿದ್ದು, ಮತ್ತೊರ್ವ ಅವಸ್ವಸ್ಥಗೊಂಡು ಘಟನೆ ರವಿವಾರ ಮಧ್ಯಾಹ್ನ ಮಿಡ್ಲ ಬೀಚ್‌ನಲ್ಲಿ ನಡೆದಿದೆ.ಗುಲ್ಬರ್ಗ ಮೂಲದ ಒಟ್ಟು ಐವರು ಪ್ರವಾಸಿಗರು ಇಲ್ಲಿಗೆ ಬಂದಿದ್ದು,ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ಅವಘಡ ಸಂಭವಿಸಿದೆ. ಅಭಿಷೇಕ ನೀರಿನಲ್ಲಿ ಮುಳುಗಿ ಮೃತಪಟ್ಟರೆ,ಆಕಾಶ (೨೨) ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.
ಶ್ಯಾಮ ಎಂಬುವವರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದು ಜೀವಾಪಾಯದಿಂದ ಪಾರಾಗಿದವರಾಗಿದ್ದಾರೆ. ಸ್ಥಳೀಯರು ಮತ್ತು ಕರಾವಳಿ ಕಾವಲು ಪಡೆಯ ಕೆ.ಎನ್.ಡಿ. ಸಿಬ್ಬಂದಿ ೧೦೮ ಅಂಬ್ಯುಲೆನ್ಸ ಮೂಲಕ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ.
ಸಕಾಲಕ್ಕೆ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯರು ರಜೆಯ ದಿನ ರವಿವಾರ ಆದರೂ ಅಂಕೋಲಾ ತಾಲೂಕ್ ವೈದ್ಯಾಕಾರಿಯಾದ ಡಾ. ಜಗದೀಶ ನಾಯ್ಕರವರು ಇಲ್ಲಿ ತಮ್ಮ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳ ಜೊತೆ ಸಕಾಲದಲ್ಲಿ ಎಲ್ಲಾ ವಿಧದ ತುರ್ತು ಚಿಕಿತ್ಸೆ ನೀಡಿ ಜೀವವನ್ನು ಉಳಿಸಲು ನೆರವಾಗಿ ಪ್ರಾಣ ಕಾಪಾಡಿದ್ದಾರೆ.ತುರ್ತು ಸಂದರ್ಭದಲ್ಲಿ ಸ್ಪಂದಿಸಿದ ವೈದ್ಯರಿಗೆ ಸಾರ್ವಜನಿಕರು ಪ್ರಶಂಸಿ ಅಭಿನಂದಿಸಿದರು.