ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ರಾಜ್ಯಗಳ ವಿಧಾನ ಸಭೆ ಚುನಾವಣೆಯಲ್ಲಿ ತ್ರೀವ ಪೈಪೋಟಿ ಕಂಡಿದ್ದು ಅಂದರೆ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ.
ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನದಲ್ಲಿ ಬಿಜೆಪಿ ಗೆಲುವಿನ ಹಾದಿಯತ್ತ ಸಾಗಿದರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದುಕೊಂಡಿದೆ. ಆದೆರೆ ಇದರ ನಡುವೆ ವಿಧಾನಸಭೆಯಲ್ಲಿ ಅಚ್ಚರಿಯ ಗೆಲುವಿನ ಮೂಲಕ ಮೋಡಿ ಮಾಡುವ ಆಸೆಯನ್ನು ಹೊಂದಿದ್ದ ಪಕ್ಷಗಳಿಗೆ ಮತದಾರ ಪೆಟ್ಟು ನೀಡಿದ್ದಾನೆ.ಅದ್ರಲ್ಲೂ ಆಮ್ ಆದ್ಮಿ ಪಕ್ಷ.ವು ಇತ್ತೇ ಎನ್ನುವ ಸಂಶವೇ ಮೂಡಿದೆ.
ಈ ವರ್ಷ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದ ಆಮ್ ಆದ್ಮಿ ಪಕ್ಷವು ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಪೂರ್ಣ ಶಕ್ತಿಯೊಂದಿಗೆ ಚುನಾವಣೆ ಎದುರಿಸಿತು. ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಹಲವಾರು ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ್ದರು. ಇದರ ಹೊರತಾಗಿಯೂ ಎಎಪಿ ಈ ಚುನಾವಣೆಗಳಲ್ಲಿ ಸೋಲನ್ನು ಎದುರಿಸಬೇಕಾಯಿತು.
ಚುನಾವಣಾ ಆಯೋಗದ ಈವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಆಮ್ ಆದ್ಮಿ ಪಕ್ಷವು ಚುನಾವಣೆಯಲ್ಲಿ ಯಾವುದೇ ವಿಶೇಷ ಸಾಧನೆ ಮಾಡಿಲ್ಲ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಸಿಎಂ ಅರವಿಂದ್ ಕೇಜ್ರಿವಾಲ್ ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಪಕ್ಷದ ಮತ ಗಳಿಕೆಯನ್ನು ಹೆಚ್ಚಿಸುವತ್ತ ಚಿತ್ತ ನೆಟ್ಟಿದ್ದರು. ಆದರೆ ಅವರ ಆಸೆ ಕೈ ಕೊಟ್ಟಿದೆ.
ಇತ್ತೀಚಿಗಿನ ಶೇಕಡಾ ವಾರು ಮತಗಳನ್ನು ನೋಡಿದರೆ, ಛತ್ತೀಸ್ಗಢದಲ್ಲಿ ಆಮ್ ಆದ್ಮಿ ಪಕ್ಷ ಶೇ.0.94 ಮತಗಳನ್ನು ಪಡೆದಿದೆ. ಮಧ್ಯಪ್ರದೇಶದಲ್ಲಿ ಪಕ್ಷವು 0.44 ಮತಗಳನ್ನು ಪಡೆದಿದೆ. ಇದಲ್ಲದೇ ಎಎಪಿ ರಾಜಸ್ಥಾನದಲ್ಲಿ ಶೇ.0.38 ಮತಗಳನ್ನು ಪಡೆದಿದೆ.