ಹೊಸದಿಗಂತ ಡಿಜಿಟಲ್ ಡೆಸ್ಕ್:
ತಂದೆ ತಾಯಿಗಳಿಗೆ, ಕಲಿಸುವ ಗುರುಗಳನ್ನು ಯಾವತ್ತೂ ಗೌರವಿಸಿ. ಅವರನ್ನು ನೋಯಿಸಬೇಡಿ ಎಂದು ಚಿತ್ರ ನಟಿ ರಚಿತಾ ರಾಮ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮದಲ್ಲಿ ಸಿನಿಮಾ ಮತ್ತು ರಂಗಭೂಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತಮ ಶಿಕ್ಷಣ ಸಂಸ್ಥೆ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುದಕ್ಕೆ ಉತ್ತಮ ಅವಕಾಶ ಎಂದರು.
ನಟ ರಮೇಶ್ ಭಟ್ ಮಾತನಾಡಿ ಎಲ್ಲಾ ಜನರಲ್ಲಿ ಒಬ್ಬೊಬ್ಬ ಕಲಾವಿದನಿದ್ದಾನೆ ಅದು ಬೇರೆ ಬೇರೆ ರೀತಿಯದ್ದಾಗಿರಬಹುದು, ಆಸಕ್ತಿದಾಯಕ ಕೆಲಸದಲ್ಲಿ ತೊಡಗಿಸಿಕೊಳ್ಳಿ, ಅದರ ಜೊತೆ ಕೇಂದ್ರೀಕತಗೊಳಿಸಿ ಆಗ ಸಾಧನೆ ಸಾದ್ಯ, ಮಕ್ಕಳು ಪಾಠ ಮಾತ್ರವಲ್ಲದೆ ಪಾಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು.
ಮೋಹನ್ ಕುಮಾರ್ ಮಂಗಳೂರು, ಗಿರೀಶ್ ಶೆಟ್ಟಿ ಕಟೀಲು, ಪ್ರಶಿಲ್ ಶೆಟ್ಟಿ ಕುಡ್ತಿಮಾರುಗುತ್ತು, ವೃಂದಾ ಹೆಗ್ಡೆ, ಕಮಲಾದೇವಿ ಪ್ರಸಾದ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು ಉಪಸ್ಥಿತರಿದ್ದರು. ಉಪ ಪ್ರಾಶುಂಪಾಲ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.
ರಚಿತಾ ರಾಮ್ ಅವರ ಬಾವಚಿತ್ರ ರಚಿಸಿದ ವಿದ್ಯಾರ್ಥಿ
ಐದು ಮಂದಿ ವಿದ್ಯಾರ್ಥಿಗಳು ರಚಿತಾ ರಾಮ್ ಅವರ ಬಾವಚಿತ್ರ ರಚಿಸಿದ್ದು, ಸ್ವತ: ರಚಿತಾ ರಾಮ್ ಅವರನ್ನು ವೇದಿಕೆಗೆ ಕರೆದು ಅವರೊಂದಿಗೆ ಚಿತ್ರ ಬಿಡಿಸಿದ ಬಗ್ಗೆ ವಿವರಣೆ ಕೇಳಿದರು, ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆಯಿಸಿ ಹಾಡು ಹಾಡುವಂತೆ ಪ್ರೇರೇಪಿಸಿ ಹಾಡಿಸಿದರು. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ತಾನೂ ಬಹಳ ಒಳ್ಳೆರು ನಮ್ಮ್ ಮಿಸ್ಸು ಹಾಡು ಹಾಡಿ ರಂಜಿಸಿದರು. ತುಳು ಶಬ್ದದಲ್ಲಿ ಮಾತಾಡಿ ಗಮನ ಸೆಳೆದರು.