ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಸಿಪಿ ಯೋಗೇಶ್ವರ್ ಭಾವ ಮಹಾದೇವಯ್ಯ ನಾಪತ್ತೆ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ.
ಪೊಲೀಸರು ಎರಡು ಮೂರು ದಿನದಿಂದ ಹುಡುಕಾಟ ಆರಂಭಿಸಿದ್ದು, ಇದೀಗ ಅವರ ಕಾರು ಚಾಮರಾಜನಗರದ ಹನೂರು ತಾಲೂಕಿನ ರಾಮಾಪುರ ಗ್ರಾಮದ ಬಳಿ ಕಾರ್ ಪತ್ತೆಯಾಗಿದೆ.
ಕಾರಿನ ಟೈ ಲ್ಯಾಂಪ್ ಬಳಿ ರಕ್ತದ ಕಲೆ ಕಾಣಿಸಿದೆ. ಹೀಗಾಗಿ ತಕ್ಷಣವೇ ಫಾರೆನ್ಸಿಕ್ ಹಾಗೂ ರಾಮನಗರ ಪೊಲೀಸ್ ತಂಡ ಆಗಮಿಸಿದೆ.
ಉದ್ಯಮಿ ಹಾಗೂ ಮೆಗಾಸಿಟಿ ನಿರ್ದೇಶಕರೂ ಆಗಿರುವ ಮಹದೇವಯ್ಯ ರಾಮನಗರದ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದರು. ಎರಡು ದಿನಗಳ ನಂತರ ಇದೀಗ ಅವರ ಕಾರ್ ಪತ್ತೆಯಾಗಿದೆ.